ಗೃಹರಕ್ಷಕದಳ ಕೇಂದ್ರ ಕಚೇರಿಯ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿ, ಮೇರಿಹಿಲ್, ಮಂಗಳೂರು ಇಲ್ಲಿ ಭ್ರಷ್ಟಾಚಾರದ ವಿರುದ್ಧ ‘ಜಾಗೃತಿ ಅರಿವು ಸಪ್ತಾಹ-2024’ ಇದರ ಅಂಗವಾಗಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಿರುವುದಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಹೋರಾಟವನ್ನು ಬೆಂಬಲಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಸಮ್ಮುಖದಲ್ಲಿ “ಜಾಗೃತಿ ಅರಿವು ಸಪ್ತಾಹ-2024”ವನ್ನು ದಿನಾಂಕ 28-10-2024ನೇ ಸೋಮವಾರದಂದು ಆಚರಿಸಲಾಯಿತು.
ಭ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞೆಯಲ್ಲಿ ಕಛೇರಿಯ ಅಧೀಕ್ಷಕರಾದ ಎನ್. ಚಂದ್ರ , ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಸಿಬ್ಬಂದಿ ದಲಾಯತ್ ಮಂಜುಳಾ ಲಮಾಣಿ ಮತ್ತು ಗೃಹರಕ್ಷಕರಾದ ಸಂಜಯ್, ಸುಲೋಚನ, ನಿಶಾ ಇವರುಗಳು ಪ್ರತಿಜ್ಞೆಯನ್ನು ಮಾಡಿದರು.