ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ತಿಂಗಳ ಕಾರ್ಯಕ್ರಮದಲ್ಲಿ “ಪ್ರವಾಸ ಕಥನ ಮಾಲಿಕೆ ಭಾಗ –2 ” ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 7.11.2024 ರಂದು ನೆರವೇರಿತು. ವೇದಿಕೆಯ ಹಿರಿಯ ಸದಸ್ಯೆ ಅನುಪಮಾ ಚಿಪ್ಲೂಂಣಕರ್ , ವಸುಧಾ ಶೆಣೈ ಮತ್ತು ಗೀತಾ ಆರ್. ಮರಾಠೆ ಇವರು ತಾವು ಕೈಗೊಂಡ ಶಿರ್ಡಿ, ವೃಂದಾವನ ಮತ್ತು ಉತ್ತರ ಭಾರತ ಪ್ರವಾಸದ ಅದ್ಭುತ, ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೊ| ಮಿತ್ರಪ್ರಭಾ ಹೆಗ್ಡೆ ಯವರು ಸ್ವಾಗತಿಸಿದರು ಮಾಲತಿ ವಸಂತರಾಜ್ ನಿರೂಪಿಸಿದ ಕಾರ್ಯಕ್ರಮವನ್ನು ಡಾ| ಸುಮತಿ ಪಿ ಇವರು ಪ್ರಾರ್ಥಿಸಿ ಕಾರ್ಯದರ್ಶಿ ಮಾಲತಿ. ಜಿ. ಪೈಯವರು ಧನ್ಯವಾದವನ್ನಿತ್ತರು. ಜಾಗೃತಿ ಮಹಿಳಾ ಸಂಘಟನೆಯ ಸದಸ್ಯೆಯರು ಭಾಗವಹಿಸಿದ್ದರು.