ಬಹುಮುಖ ಪ್ರತಿಭೆಯ ಹೆಸರಾಂತ ಕಲಾವಿದೆ ಅಯನಾ. ವಿ. ರಮಣ್ ಮೂಡುಬಿದಿರೆ,
ದೂರದರ್ಶನ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ
ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾರ್ಗದರ್ಶನದಲ್ಲಿ , ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಎದುರಿಸಿದ್ದ ಅವರು ” ಬಿ ” ಗ್ರೇಡ್ ಮಾನ್ಯತೆ ಪಡೆದಿದ್ದಾರೆ.
ಬೆಂಗಳೂರಿನ ಕರ್ನಾಟಕ ಕಲಾಶ್ರೀವಿದ್ವಾನ್ ಸತ್ಯನಾರಾಯಣ ರಾಜು ಅವರಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಅಯನಾ ಸಾಧನೆಗೆ ಉಡುಪಿ ಶ್ರೀ ಕೃಷ್ಣ ಮಠ – ಪರ್ಯಾಯ ಶ್ರೀ ಪುತ್ತಿಗೆ ಮಠದ
ಶ್ರೀ ಶ್ರೀ ಸುಗುಣೇ0ದ್ರ ತೀರ್ಥ ಶ್ರೀಪಾದರು ಆಶೀರ್ವಾದ ಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು , ಅಯನಾ .ವಿ. ರಮಣ್ ನಡೆಸುವ ನೃತ್ಯ ಸಂಸ್ಥೆ “ನಾಟ್ಯಾಯನ ಮೂಡುಬಿದಿರೆ ” ಮತ್ತು ನೃತ್ಯ ಗುರುವಾಗಿರುವ “ರಂಗಭಾರತಿ ಕಲಾಮಂದಿರಮ್”, ಕುಶಾಲನಗರ , ಸಂಸ್ಥೆಗಳ ಪದಾಧಿಕಾರಿಗಳು- ವಿದ್ಯಾರ್ಥಿಗಳು- ಹೆತ್ತವರು ಅಭಿನಂದಿಸಿದ್ದಾರೆ.
ಮನೆ- ಮನೆಗೆ ಭರತನಾಟ್ಯ ಮತ್ತು ವಿಶಿಷ್ಟವಾದ ನಾಟ್ಯಾಯನ ಕಾರ್ಯಕ್ರಮಗಳನ್ನು ದೇಶ – ವಿದೇಶಗಳಲ್ಲಿ ಪ್ರದರ್ಶನ ಮಾಡುತ್ತಿರುವ ಅಯನಾ ಮೈಸೂರು ವಿವಿ ಯಲ್ಲಿ ಆಂಗ್ಲ ಭಾಷೆಯ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ . ಮುಕಾಂಬಿಕಾ .ಜಿ. ಎಸ್ ಮತ್ತು ಶ್ರೀ ಪುತ್ತಿಗೆ ಮಠದ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರಕ ಕೆ. ವಿ. ರಮಣ್ ಆಚಾರ್ಯ ದಂಪತಿಯ ಪುತ್ರಿಯಾಗಿದ್ದಾರೆ.