ಅಯೋಧ್ಯೆ: ರಾಮಲಲ್ಲಾನ ದರ್ಶನಕ್ಕಾಗಿ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಮಾಹಿತಿ ನೀಡಿದೆ. ಇನ್ನು ಮುಂದೆ ಭಕ್ತರು ಪ್ರತಿದಿನ ಬೆಳಗ್ಗೆ 6.30 ರಿಂದ ರಾತ್ರಿ 9.30ರವರೆಗೆ ಯಾವುದೇ ತಡೆಯಿಲ್ಲದೇ ರಾಮ ಜನ್ಮಭೂಮಿ ಮಂದಿರದಲ್ಲಿ ಪ್ರಸಕ್ತ ಪ್ರತಿ ದಿನ ಸರಾಸರಿ 1ರಿಂದ 1.5 ಲಕ್ಷ ಭಕ್ತರು ಶ್ರೀರಾಮ ಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಪ್ರವೇಶಿಸುವುದರಿಂದ ದರ್ಶನದ ನಂತರ ಹೊರ ಬರುವ ಪ್ರಕ್ರಿಯೆಯು ತುಂಬಾ ಸರಳ ಮತ್ತು ಸುಲಭವಾಗಿದೆ. ಸಾಮಾನ್ಯವಾಗಿ ಭಕ್ತರು 60 ದಿಂದ 75 ನಿಮಿಷಗಳಲ್ಲಿ ರಾಮಲಲ್ಲಾನ ದರ್ಶನವನ್ನು ಸುಲಭವಾಗಿ ಪಡೆಯುತ್ತಾರೆ. ಜನ್ಮಭೂಮಿ ಮಂದಿರದಲ್ಲಿ ನಿಗದಿತ ಶುಲ್ಕ ಅಥವಾ ಯಾವುದೇ ವಿಶೇಷ ಪಾಸ್ ತೆಗೆದುಕೊಳ್ಳುವ ಮೂಲಕ ದರ್ಶನಕ್ಕೆ ಅವಕಾಶವಿಲ್ಲ. ದರ್ಶನಕ್ಕೆ ಹಣ ತೆಗೆದುಕೊಳ್ಳುವ ಸುದ್ದಿ ಕೇಳಿ ಬಂದರೆ ಅದು ವಂಚನೆಯ ಪ್ರಯತ್ನವಾಗಿರಬಹುದು. ಇದಕ್ಕೂ ಟ್ರಸ್ಟ್‌ಗೂ ಯಾವುದೇ ಸಂಬಂಧವಿಲ್ಲ.
ಮೊಬೈಲ್, ಹೂವು, ಪ್ರಸಾದ ತರಬೇಡಿ: ಭಕ್ತರು ತಮ್ಮ ಅನುಕೂಲಕ್ಕಾಗಿ ಸಮಯವನ್ನು ಉಳಿಸಲು ತಮ್ಮ ಮೊಬೈಲ್ ಫೋನ್, ಪಾದರಕ್ಷೆ ಗಳು, ಪರ್ಸ್ ಇತ್ಯಾದಿಗಳನ್ನು ಮಂದಿರದ ಆವರಣದ ಹೊರಗೆ ಬಿಡಲು ಸೂಚಿಸಲಾಗಿದೆ. ಅಲ್ಲದೇ ಅಯೋಧ್ಯೆಯ ಬೇರೆ ಮಂದಿರಗಳಿಗೆ ಕೊಂಡೊಯ್ಯುವಂತೆ ಭಕ್ತರು ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಹೂವು, ಹಾರ, ಪ್ರಸಾರ ಇತ್ಯಾದಿಗಳನ್ನು ತರಬಾರದು ಎಂದು ಟ್ರಸ್ಟ್ ಸೂಚನೆ ನೀಡಿದೆ. ಮಂದಿರದಲ್ಲಿ ವೃದ್ಧರು ಮತ್ತು ಅಂಗವಿಕಲರಿಗೆ ಗಾಲಿ ಕುರ್ಚಿಗಳಿವೆ. ಈ ಗಾಲಿ ಕುರ್ಚಿಗಳು ಶ್ರೀ ರಾಮ ಜನ್ಮಭೂಮಿ ಮಂದಿರದ ಸಂಕೀರ್ಣಕ್ಕೆ ಮಾತ್ರವೇ ಹೊರತು ಅಯೋಧ್ಯೆ ನಗರಕ್ಕೆ ಅಥವಾ ಬೇರೆ ಯಾವುದೇ ದೇವಸ್ಥಾನಕ್ಕೆ ಅಲ್ಲ. ಈ ಗಾಲಿ ಕುರ್ಚಿಗೆ ಬಾಡಿಗೆ ಇಲ್ಲ ಆದರೆ, ಅದನ್ನು ಒಯ್ಯುವ ಯುವಕನಿಗೆ ಹಣ ನೀಡಬೇಕಾಗಿದೆ ಎಂದು ಟ್ರಸ್ಟ್ ತಿಳಿಸಿದೆ.