ಲಕ್ನೊ: ಅಯೋಧ್ಯೆಯ ರಾಮ ಮಂದಿರದಲ್ಲಿ ಬುಧವಾರ ರಾಮನವಮಿಯ ಹಿನ್ನೆಲೆಯಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯ ಕಿರಣ ಸ್ಪರ್ಶಿಸಿದ್ದು, ನೆರೆದಿದ್ದ ಸಾವಿರಾರು ಭಕ್ತರು ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದರು.
ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ನಂತರ ನಡೆದ ಮೊದಲ ರಾಮನವಮಿ ಇದಾಗಿದ್ದು, ಈ ದಿನವೇ ಬಾಲರಾಮನ ಹಣೆಯ ಮೇಲೆ ಸೂರ್ಯ ಕಿರಣ ಸ್ಪರ್ಶಿಸಿದೆ.
ಬಾಲರಾಮನ ಪ್ರತಿಮೆಯ ಮೇಲೆ 12 ಗಂಟೆ 1 ನಿಮಿಷಕ್ಕೆ ಸೂರ್ಯ ತಿಲಕ ಕಂಗೊಳಿಸಿತುಯ. ಸುಮಾರು ಎರಡೂವರೆ ನಿಮಿಷಗಳ ಕಾಲ ಸೂರ್ಯ ಕಿರಣ ಬಾಲರಾಮನ ಹಣೆಯ ಮೇಲೆ ಸ್ಪರ್ಶಿಸಿತು ಎಂದು ಮೂಲಗಳು ತಿಳಿಸಿವೆ.
ಈ ಮಹತ್ವದ ಸನ್ನಿವೇಶವನ್ನು ಅಯೋಧ್ಯೆಯಲ್ಲಿ ಸುಮಾರು ನೂರು ಎಲ್ ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಯಿತು. ಐಐಟಿ ವಿಜ್ಞಾನಿಗಳು ಈ ಕೌತುಕದ ವಿದ್ಯಾಮಾನದ ಕೌಶಲವನ್ನು ಕಾರ್ಯಗತಗೊಳಿಸಲು ಶ್ರಮಿಸಿದ್ದರು. ಪ್ರತಿವರ್ಷ ರಾಮನವಮಿ ದಿನದಂದು ಈ ವಿದ್ಯಮಾನ ಸಂಭವಿಸಲಿದೆ. ರಾಮ ನವಮಿ ದಿನ ಬಾಲರಾಮನ ಹಣೆಯ ಮೇಲೆ ಸೂರ್ಯ ಕಿರಣ ಬೀಳಲಿದೆ.