ಮಂಗಳೂರು: ನಗರದ ಫಿಜಾ ಬೈ ನೆಕ್ಸಸ್ ಸೇರಿದಂತೆ ದೇಶಾದ್ಯಂತ 17 ಮಾಲ್‍ಗಳನ್ನು ನಿರ್ವಹಿಸುತ್ತಿರುವ ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರನ್ನು ನಿಯೋಜಿಸಿಕೊಳ್ಳಲಾಗಿದೆ ಎಂದು ನೆಕ್ಸಸ್ ಮಾಲ್ ಪ್ರಕಟಿಸಿದೆ.
ಈ ಸಹಯೋಗವು ದೇಶಾದ್ಯಂತ ಲಕ್ಷಾಂತರ ಜನರಿಗೆ ಶಾಪಿಂಗ್ ಮತ್ತು ಜೀವನಶೈಲಿಯ ಅನುಭವಗಳನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿರುವ ನೆಕ್ಸಸ್ ಸೆಲೆಕ್ಟ್ ಮಾಲ್‍ಗಳ ರೋಚಕ ಪಯಣದಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ ಎಂದು ನೆಕ್ಸಸ್ ಸೆಲೆಕ್ಟ್ ಟ್ರಸ್ಟ್ ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ನಿಶಾಂಕ್ ಜೋಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ನೆಕ್ಸಸ್ ಸೆಲೆಕ್ಟ್ ಮಾಲ್‍ಗಳೊಂದಿಗಿನ ತನ್ನ ಒಡನಾಟದ ಕುರಿತು ಮಾತನಾಡಿದ ಆಯುಷ್ಮಾನ್ ಖುರಾನಾ, “ನಾನು ಮನೆಗೆ ಹಿಂದಿರುಗುತ್ತಿರುವಂತೆ ಭಾಸವಾಗುತ್ತಿದೆ. ನೆಕ್ಸಸ್ ಮಾಲ್‍ಗಳೊಂದಿಗಿನ ನನ್ನ ಸಹಯೋಗವು ಜನರಿಗೆ ಸ್ಮರಣೀಯ ಅನುಭವಗಳನ್ನು ಸೃಷ್ಟಿಸುವುದು. ನೆಕ್ಸಸ್ ಸೆಲೆಕ್ಟ್ ಮಾಲ್‍ಗಳು ಯಾವಾಗಲೂ ಉನ್ನತ ದರ್ಜೆಯ ಚಿಲ್ಲರೆ ಮತ್ತು ಮನರಂಜನೆಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿವೆ ಮತ್ತು ಮತ್ತೊಮ್ಮೆ ಅವರ ಪ್ರಯಾಣದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.
ನೆಕ್ಸಸ್ ಸೆಲೆಕ್ಟ್ ಮಾಲ್‍ಗಳು, ಅದರ ವ್ಯಾಪಕ ಉಪಸ್ಥಿತಿ ಮತ್ತು ಉತ್ಕøಷ್ಟತೆಯ ಬದ್ಧತೆಯೊಂದಿಗೆ, ಚಿಲ್ಲರೆ ವಲಯದಲ್ಲಿ ಟ್ರಯಲ್‍ಬ್ಲೇಜರ್ ಆಗಿ ಮುಂದುವರೆದಿದೆ. ಆಯುಷ್ಮಾನ್ ಖುರಾನಾ ಬ್ರಾಂಡ್ ಅಂಬಾಸಿಡರ್ ಆಗಿ, ಮುಂದಿನ ಪ್ರಯಾಣವು ಇನ್ನಷ್ಟು ಅದ್ಭುತವಾಗಿರಲು ಸಿದ್ಧವಾಗಿದೆ, ಶೈಲಿ, ಮನರಂಜನೆ ಮತ್ತು ನಾವೀನ್ಯತೆಗಳ ಮಿಶ್ರಣವನ್ನು ಮುಂದಿಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.