Sunday, January 19, 2025
Homeರಾಜ್ಯಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ


ರಾಯಚೂರು: ಧರ್ಮಾತೀತವಾಗಿ ಅಯ್ಯಪ್ಪಸ್ವಾಮಿಯನ್ನು ಆರಾಧಿಸುತ್ತಿದ್ದು, ಮುಸ್ಲಿಂ ವ್ಯಕ್ತಿಯೊಬ್ಬರು ಮಾಲೆ ಧರಿಸುವ ಮೂಲಕ ಭಕ್ತಿ ಮೆರೆದಿದ್ದಾನೆ.
ಜಿಲ್ಲೆಯ ದೇವದುರ್ಗ ಪಟ್ಟಣದ ಬಾಬು ಗೌರಂಪೇಟ್ ಮಾಲೆ ಧರಿಸಿದ್ದಾರೆ. ಮಕರ ಸಂಕ್ರಾಂತಿ ಪ್ರಯುಕ್ತ ಶಬರಿಮಲೆ ಅಯ್ಯಪ್ಪಸ್ವಾಮಿಗೆ ಹರಕೆ ಹೊತ್ತು ಮಾಲೆ ಧರಿಸುವವರ ಸಂಖ್ಯೆಗೇನು ಕಡಿಮೆ ಇಲ್ಲ.
ಅನೇಕ ಹಿಂದು ಭಕ್ತರ ಜತೆಗೆ ಬಾಬು ಕೂಡ ಜತೆಯಾಗಿದ್ದಾರೆ.ಪ್ರತಿ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಸರದಿ ಸಾಲಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.

ಬಾಬು ಅವರು ಎಲ್ಲರಂತೆ ಅಯ್ಯಪ್ಪ ಸ್ವಾಮಿ ಪೂಜೆ ಸಲ್ಲಿಸುತ್ತಾರೆ. ಎಲ್ಲರೊಡಗೂಡಿ ಪಾದಯಾತ್ರೆ ನಡೆಸುತ್ತಾರೆ. ಅಲ್ಲದೇ, ಶಬರಿಮಲೆಗೆ ತೆರಳಿ ಭಕ್ತಿ ಸಮರ್ಪಿಸುತ್ತಾರೆ.

RELATED ARTICLES
- Advertisment -
Google search engine

Most Popular