ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬಳಿ ರೂ ೧.೬೦ ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ಏ.೪ರಿಂದ ೯ರತನಕ ನಡೆಯಲಿರುವ ದೇವರ ವಿಗ್ರಹ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಗುರುವಾರ ಸಂಜೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಬಿ.ಸಿ.ರೋಡು ಕೈಕಂಬ ಪೊಳಲಿ ದ್ವಾರ ಬಳಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳಿAದ ಕುಣಿತ ಭಜನೆ, ಚೆಂಡೆ-ತಾಳ ವಾದನ, ಬ್ಯಾಂಡ್, ವಾದ್ಯ, ಕೊಂಬು, ಗೊಂಬೆ ಕುಣಿತಗಳ ಜೊತೆಗೆ ಕಳಶ ಹೊತ್ತ ನೂರಾರು ಮಂದಿ ಸಮವಸ್ತçಧಾರಿ ಮಹಿಳೆಯರು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು. ಬಂಟ್ವಾಳ ಟೌನ್ ರೋಟರಿ ಕ್ಲಬ್ ಸಹಿತ ವಿವಿಧ ಸಂಘ ಸಂಸ್ಥೆಗಳು ಮತ್ತು ದೇವಸ್ಥಾನ ಹಾಗೂ ಭಜನಾ ಮಂಡಳಿ ವತಿಯಿಂದ ಅಕ್ಕಿ, ತೆಂಗಿನಕಾಯಿ, ಹಿಂಗಾರ, ಬಾಳೆಗೊನೆ, ಬಾಳೆ ಎಲೆ, ಅಡಿಕೆ, ತರಕಾರಿ ಮತ್ತಿತರ ಸಾಮಾಗ್ರಿಗಳು ಸಾಲು ಸಾಲು ವಾಹನಗಳ ಮೂಲಕ ಸಾಗಿ ಬಂದವು. ಬಂಟ್ವಾಳ ಸಂಚಾರಿ ಠಾಣೆ ಸಹಿತ ಗ್ರಾಮಾಂತರ ಮತ್ತು ನಗರ ಠಾಣೆ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ಬೂಡ ಅಧ್ಯಕ್ಷ ಬೇಬಿ ಕುಂದರ್, ಆಡಳಿತ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಬಿ.ಸಂಜೀವ ಪೂಜಾರಿ ಬಿ.ಸಿ.ರೋಡು, ಉಪಾಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ವಕೀಲ ಎಂ.ಅಶ್ವನಿ ಕುಮಾರ್ ರೈ, ಪ್ರಮುಖರಾದ ಸತೀಶ ಭಂಡಾರಿ ಕುಳತ್ತಬೆಟ್ಟು, ಚಂದ್ರಪ್ರಕಾಶ ಶೆಟ್ಟಿ ತುಂಬೆ, ಭುವನೇಶ್ ಪಚ್ಚಿನಡ್ಕ, ಐತ್ತಪ್ಪ ಪೂಜಾರಿ, ಬಿ.ಮೋಹನ್, ಎನ್.ಶಿವಶಂಕರ್, ಕೆ.ನಾರಾಯಣ ಹೆಗ್ಡೆ, ರಾಜೇಶ ಎಲ್.ನಾಯಕ್, ಸತೀಶ ಕುಮಾರ್, ಗೋಪಾಲ ಸುವರ್ಣ, ರಮೇಶ ಸಾಲ್ಯಾನ್, ವಸಂತ ರಾವ್, ಶ್ರೀಧರ ಮಲ್ಲಿ, ಲೋಕನಾಥ ಶೆಟ್ಟಿ, ಉಮೇಶ ಕುಮಾರ್ ವೈ., ಕೆ.ಹರಿಕೃಷ್ಣ ಬಂಟ್ವಾಳ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಬಿ.ದೇವದಾಸ ಶೆಟ್ಟಿ, ಸುದರ್ಶನ್ ಬಜ, ದೇವಪ್ಪ ಪೂಜಾರಿ ಬಾಳಿಕೆ, ಪ್ರಭಾಕರ ಪ್ರಭು, ರಾಜೇಶ ಸುವರ್ಣ, ಚಂದ್ರಶೇಖರ ಭಂಡಾರಿ ಅಮ್ಮುಂಜೆ, ಚಂದ್ರಶೇಖರ ಪೂಜಾರಿ, ಸದಾಶಿವ ಬಂಗೇರ, ವಕೀಲರ ಸಂಘದ ಅಧ್ಯಕ್ಷ ರಿಚಾಡ್ ð ಡಿಕೋಸ್ತ, ಪ್ರಸಾದ್ ಕುಮಾರ್ ರೈ, ರೊನಾಲ್ಡ್ ಡಿಸೋಜ, ಅರುಣ್ ರೋಶನ್ ಡಿಸೋಜ, ರಾಜೇಶ ಬಾಳೆಕಲ್ಲು, ಸುರೇಶ ಕುಮಾರ್ ನಾವೂರು, ದಿವಾಕರ ಪಂಬದಬೆಟ್ಟು, ಹರಿಪ್ರಸಾದ್, ಮೋಹನ್ ಶೆಟ್ಟಿ, ಕಿಶೋರ್ ಕುಮಾರ್, ಜಗದೀಶ ಕುಂದರ್, ದೇವಪ್ಪ ಕರ್ಕೇರ ನೆಕ್ಕರೆಗುಳಿ ಮತ್ತಿತರರು ಇದ್ದರು.
ಬಿ.ಸಿ.ರೋಡು: ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಗೆ ಆಕರ್ಷಕ ಮೆರವಣಿಗೆ, ಹರಿದು ಬಂದ ಹೊರೆಕಾಣಿಕೆ
RELATED ARTICLES