ಕಕ್ಕೆಪದವು | ಆಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

0
310

ಉಪ್ಪಿನಂಗಡಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರುನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆಕೆ ಆಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕು ಕಕ್ಕೆಪದವು ಪರಿಸರದ ಉಮೇಶ್‌ ಎಂಬವರ ಪತ್ನಿ ಪವಿತ್ರಾ ಎಂಬವರು ಆಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಪವಿತ್ರಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಹೋಗಲು 108 ಆಂಬುಲೆನ್ಸ್‌ ಸೇವೆಗಾಗಿ ಕರೆ ಮಾಡಿದ್ದರು. ಈ ವೇಳೆ ಪರಿಸರದ ಎರಡೂ ಆಂಬುಲೆನ್ಸ್‌ಗಳು ಬೇರೆಡೆ ಇದ್ದ ಕಾರಣ, ಉಪ್ಪಿನಂಗಡಿಯಲ್ಲಿದ್ದ ಆಂಬುಲೆನ್ಸ್‌ ಕಳುಹಿಸಲಾಗಿತ್ತು. ಉಪ್ಪಿನಂಗಡಿಯಿಂದ ಕಕ್ಕೆಪದವಿಗೆ ಹೋಗಿ ಗರ್ಭಿಣಿಯನ್ನು ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ದಾರಿ ಮಧ್ಯೆ ಬಂಟ್ವಾಳ ಸಮೀಪ ಪವಿತ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.


ಆಂಬುಲೆನ್ಸ್‌ ಸಿಬ್ಬಂದಿ ರುಬೆನ್‌ ಕರ್ಜೆಟ್ಟಿ ಸುರಕ್ಷಿತ ಹೆರಿಗೆ ಮಾಡಿಸಿದರು. ಆಂಬುಲೆನ್ಸ್‌ ಚಾಲಕ ವೀರೇಶ್‌ ಸಹಕರಿಸಿದರು. ತಾಯಿ, ಮಗು ಆರೋಗ್ಯವಾಗಿದ್ದಾರೆ. ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here