Thursday, July 25, 2024
Homeಮೂಡುಬಿದಿರೆಅಲಂಗಾರು-ಪಾಲಡ್ಕ ರಸ್ತೆಯ ದುರಾವಸ್ಥೆ: ಇನ್ನೂ ಕ್ರಮ ಕೈಗೊಳ್ಳದ ಸಂಬಂಧ ಪಟ್ಟ ಅಧಿಕಾರಿಗಳು

ಅಲಂಗಾರು-ಪಾಲಡ್ಕ ರಸ್ತೆಯ ದುರಾವಸ್ಥೆ: ಇನ್ನೂ ಕ್ರಮ ಕೈಗೊಳ್ಳದ ಸಂಬಂಧ ಪಟ್ಟ ಅಧಿಕಾರಿಗಳು

ಮೂಡುಬಿದಿರೆ : ಅಲಂಗಾರು ಕಡಲಕೆರೆ – ರಿಂಗ್ ರೋಡ್ ಪ್ರದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದ ಸ್ಥಿತಿ ಇದ್ದು ಮುಂದಕ್ಕೆ ಕೈಗಾರಿಕಾ ಪ್ರದೇಶದಲ್ಲಿರುವ ರಸ್ತೆಯಂತೂ ಕೆಸರಗದ್ದೆಯಾಗಿದೆ. ಹೊಂಡಗುಂಡಿಮಯವಾಗಿದೆ. ಹಾಗೆಯೇ ಸಾಗುತ್ತ ಮುಂದೆ ಹೋದಂತೆಲ್ಲ ಪಟ್ಟ ಚಡವು ಸಿಗುವಲ್ಲಿ ಎರಡೂ ಬದಿಯಲ್ಲಿ ಚರಂಡಿ ಎಂಬುದಿಲ್ಲ, ಗುಡ್ಡದ ಮಣ್ಣು ಕೂಡ ಕುಸಿಯುವ ಭೀತಿಯಲ್ಲಿದೆ.
ಕೊಡ್ಕಡ್ಕ ಪೆಟ್ರೊಲ್ ಪಂಪಿನ ಎದುರಿನ ರಸ್ತೆಯಲ್ಲಿ ಗುಂಡಿಗಳನ್ನು ಮರೆ ಮಾಚಲು ಹಾಕಿದ ಜಲ್ಲಿನೀರು ಪಾಲಾಗಿದೆ.ಮಳೆಗಾಲ ಆರಂಭವಾದರೂ ಅಲಂಗಾರು ಜಂಕ್ಷನ್ ನಿಂದ ಕೊಡ್ಕಡ್ಕ ಪಾಲಡ್ಕ ದತ್ತ ಸಾಗುವ ರಸ್ತೆಯುದ್ದಕ್ಕೂ ಯಾವ ಸಿದ್ಧತೆಯೂ ನಡೆದಂತಿಲ್ಲ.

ಕೊಡ್ಕಡ್ಕ ದೇವಸ್ಥಾನದ ಎದುರಿನ ರಸ್ತೆ ಬದಿ ಸರಿಯಾದ ಚರಂಡಿ ಇಲ್ಲದೆ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಕೊಡ್ಕಡ್ಡ ಪೇಟೆಯಲ್ಲಿ ರಸ್ತೆಯಲ್ಲಿರುವ ಹೊಂಡಗಳು ವಾಹನ ಸವಾರರಿಗೆ ಆಪಾಯಕಾರಿಯಾಗಿದೆ. ಪಾಲಡ್ಡ ಚರ್ಚ್ ಹತ್ತಿರದ ತಿರುವು ಕೂಡ ಆಪಾಯಕಾರಿ ಸ್ಥಿತಿಯಲ್ಲಿದೆ. ಕುಕ್ಕುದಕಟ್ಟೆಯಲ್ಲಿ ಚರಂಡಿ ಇಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ಹೊಯ್ದಾಡುವಂತಾಗಿದೆ.

RELATED ARTICLES
- Advertisment -
Google search engine

Most Popular