Monday, July 15, 2024
Homeಧಾರ್ಮಿಕಬಾಡಬೆಟ್ಟು ಶ್ರೀ ಶನೀಶ್ವರ-ಚೌಡೇಶ್ವರಿ ದೇಗುಲ: ಅಷ್ಟಪವಿತ್ರ ನಾಗಮಂಡಲೋತ್ಸವ: ಚಪ್ಪರ ಮುಹೂರ್ತ

ಬಾಡಬೆಟ್ಟು ಶ್ರೀ ಶನೀಶ್ವರ-ಚೌಡೇಶ್ವರಿ ದೇಗುಲ: ಅಷ್ಟಪವಿತ್ರ ನಾಗಮಂಡಲೋತ್ಸವ: ಚಪ್ಪರ ಮುಹೂರ್ತ

ತಲ್ಲೂರು : ಕನ್ಯಾನ ಗ್ರಾಮದ ಕೂಡು ಬಾಡಬೆಟ್ಟುವಿನ ಶ್ರೀ ಶನೀಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಎ. 14 ರಂದು ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆಯು ಬುಧವಾರ ನಡೆಯಿತು. ಕ್ಷೇತ್ರದ ಆಡಳಿತ ಧರ್ಮದರ್ಶಿ ಜಯರಾಮ ಸ್ವಾಮಿ, ಬನ್ನೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ ಅಪ್ಪಣ್ಣ ಹೆಗ್ಡೆ ಕ್ಷೇತ್ರದ ಪ್ರಧಾನ ಪುರೋಹಿತ ಗುರುರಾಜ ಸೋಮಯಾಜಿ ಬ್ರಹ್ಮನಜೆಡ್ಡು ನೇರಳಕಟ್ಟೆ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಶೆಟ್ಟಿ ಮಂಜುನಾಥೇಶ್ವರ ಭಜನಾ ಪರಿಷತ್ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ ಕುಮಾರ್ ಬನ್ನೂರು, ನಾಗಮಂಡಲೋತ್ಸವ ಸಮಿತಿಯ ಮಾರ್ಗದರ್ಶಕ ರತ್ನಾಕರ ಶೆಟ್ಟಿ ಅಂಪಾರು, ನಾಗಮಂಡಲೋತ್ಸವ ಅಧ್ಯಕ್ಷ ಮಂಜುನಾಥ್ ಖಾರ್ವಿ ಕೊಡೇರಿ, ಜಗದೀಶ್ ಆಚಾರ್ಯ ಹಟ್ಟಿಯಂಗಡಿ, ಚಂದ್ರಮತಿ ಶೆಡ್ತಿ ತಲ್ಲೂರು, ರವಿ ದೇವಾಡಿಗೆ ಬಾಡಬೆಟ್ಟು, ಉದ್ಯಮಿ ರವಿರಾಜ್ ದೇವಾಡಿಗೆ ಹಳನಾಡು, ಮಹಾಬಲ ಹಟ್ಟಿಕುದ್ರು, ರಾಜು ಸೌಕೂರು, ಊರ ಹಾಗೂ ಪರವೂರ ಭಕ್ತರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular