Friday, March 21, 2025
Homeಮುಲ್ಕಿಬಡಗ ಎಕ್ಕಾರು: ಖೋಖೋ ಮೊದಲ ಸುತ್ತಿನಲ್ಲಿ ಗೆಲುವನ್ನು ಸಾಧಿಸಿದ ವಿದ್ಯಾರ್ಥಿನಿಯರ ತಂಡ

ಬಡಗ ಎಕ್ಕಾರು: ಖೋಖೋ ಮೊದಲ ಸುತ್ತಿನಲ್ಲಿ ಗೆಲುವನ್ನು ಸಾಧಿಸಿದ ವಿದ್ಯಾರ್ಥಿನಿಯರ ತಂಡ

ಬಜಪೆ:ಹೆಚ್ ಸಿ ಎಲ್ ಫೌಂಡೇಶನ್ ಚೆನ್ನೈನಲ್ಲಿ ಆಯೋಜಿಸಿದ ಸ್ಪೋರ್ಟ್ಸ್ ಫೋರ್ ಚೇಂಜ್ ರಾಷ್ಟ್ರಮಟ್ಟದ ಕ್ರೀಡಾಕೂಟವು ಶ್ರೀ ಶಿವ ಸುಬ್ರಮಣ್ಯ ನಡಾರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಳವಕ್ಕಂ ತಮಿಳ್ ನಾಡು ಇಲ್ಲಿ ನಡೆದಿದ್ದು, ರಾಷ್ಟ್ರಮಟ್ಟದ ಖೋಖೋ ಪಂದ್ಯಾಟದಲ್ಲಿ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಶಾಲೆಯ ವಿದ್ಯಾರ್ಥಿನಿಯರ ಖೋಖೋ ತಂಡ ಉತ್ತರ ಪ್ರದೇಶದೊಂದಿಗೆ ಮೊದಲ ಸುತ್ತಿನಲ್ಲಿ ಒಂದು ಅಂಕದ ರೋಚಕ ಗೆಲುವನ್ನು ಸಾಧಿಸಿತು. ಮುಂದಿನ ಪಂದ್ಯದಲ್ಲಿ ರಾಜಸ್ಥಾನವನ್ನ ಸೋಲಿಸಿತು. ನಂತರ ಸೆಮಿ ಫೈನಲ್ ಗೆ ಆಯ್ಕೆಯಾಗಿ ಸೆಮಿ ಫೈನಲ್ ನಲ್ಲಿ ಒಂದು ಇನ್ನಿಂಗ್ಸ್ ಮತ್ತು ಆರು ಅಂಕಗಳಿಂದ ಆಂಧ್ರಪ್ರದೇಶ ತಂಡವನ್ನು ನಿರಾಯಾಸವಾಗಿ ಮಣಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿ ಉತ್ತರ ಪ್ರದೇಶ ತಂಡದೊಂದಿಗೆ ತೀವ್ರವಾಗಿ ಸೆಣಸಾಡಿ ದ್ವಿತೀಯ ಸ್ಥಾನವನ್ನು ಪಡೆಯಿತು.
ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿದ್ಯಾಲತ ಅವರು ತರಭೇತಿ ನೀಡಿದ್ದರು. ಅಲ್ಲದೆ ರಾಷ್ಟ್ರಮಟ್ಟದ ರೀಲೆ ಸ್ಪರ್ಧೆಯಲ್ಲಿ ಬಡಗ ಎಕ್ಕಾರು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಮೀಕ್ಷಾ, ಸ್ಮಿತಾ, ಭೂಮಿಕ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದರು.

RELATED ARTICLES
- Advertisment -
Google search engine

Most Popular