Saturday, December 14, 2024
Homeಅಪಘಾತಬಡಾಕೆರೆ:ರೈಲು ಡಿಕ್ಕಿ ಹೊಡೆದು ಚಿರತೆ ಸಾವು

ಬಡಾಕೆರೆ:ರೈಲು ಡಿಕ್ಕಿ ಹೊಡೆದು ಚಿರತೆ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಸಮೀಪ ಸೌಪರ್ಣಿಕಾ ನದಿ ಮೇಲೆ ಹಾದು ಹೋಗಿರುವ ಕೊಂಕಣ ರೈಲು ಬ್ರಿಡ್ಜ್ ಮೇಲೆ ಅಂದಾಜು ಐದು ವರ್ಷ ಪ್ರಾಯವನ್ನು ಹೊಂದಿರುವ ಬೃಹತ್ ಗಾತ್ರದ ಗಂಡು ಚಿರತೆಯೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಬೆಳಗಿನ ಜಾವ 4.40 ರ ಸುಮಾರಿಗೆ ಇವೊಂದು ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ.ಉಪ ವಲಯ ಅರಣ್ಯಾಧಿಕಾರಿಗಳಾದ ಪೂರ್ಣಚಂದ್ರ ಮತ್ತು ಸೆಲ್ವ ಮುರುಗನ್,ಅರಣ್ಯ ವೀಕ್ಷಕ ಸುರೇಶ್,ಗಸ್ತು ಅರಣ್ಯ ಪಾಲಕರಾದ ಮಂಜುನಾಥ ನಾಯಕ್ ಮತ್ತು ರಮೇಶ್ ಹಾಗೂ ನಾಡ ಪಶು ವೈದ್ಯಾಧಿಕಾರಿ ಡಾ.ಹರೀಶ್.ಕೆ.ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು.ಮರಣೋತ್ತರ ಪರೀಕ್ಷೆ ಬಳಿಕ ಮೃತ ಚಿರತೆ ದೇಹವನ್ನು ಮಣ್ಣಿನಲ್ಲಿ ಹೂಳಲಾಯಿತು.

RELATED ARTICLES
- Advertisment -
Google search engine

Most Popular