ಕಾಸರಗೋಡು: ಕೇವಲ ಮೂರು ನಿಮಿಷಗಳಲ್ಲಿ ಭಗವದ್ಗೀತೆಯ 700 ಶ್ಲೋಕಗಳನ್ನು ಬರೆದು ಇಲ್ಲಿನ ಬದಿಯಡ್ಕದ ವಿದ್ಯಾರ್ಥಿಗಳು ವಿಶ್ವದಾಖಲೆಯತ್ತ ಸಾಗಿದ್ದಾರೆ. ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕಗಳನ್ನು ಸಂಸ್ಕೃತದಲ್ಲಿ ಬರೆದು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ವಿಶ್ವ ದಾಖಲೆ ಬರೆದಿದ್ದಾರೆ.
ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಅಮೃತಸರ ಪಂಜಾಬ್ ಈ ಸಂಸ್ಥೆಯವರ ಅನುಮೋದನೆ ಮೇರೆಗೆ 100 ಮಂದಿ ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರು ಏಳು ಶ್ಲೋಕದಂತೆ ಬರೆದರು. ತನ್ಮೂಲಕ 20 ಅಡಿ ಎತ್ತರ, 12 ಅಡಿ ಅಗಲದ ಕೃಷ್ಣನ ಚಿತ್ರದ ಭಗವದ್ಗೀತೆಯ ಪುಟ ಅನಾವರಣಗೊಂಡಿತು.