Wednesday, July 24, 2024
Homeಅಂತಾರಾಷ್ಟ್ರೀಯಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾಟ ಆಡುತ್ತಿರುವಾಗಲೇ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಚೀನಾದ ಆಟಗಾರ

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾಟ ಆಡುತ್ತಿರುವಾಗಲೇ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಚೀನಾದ ಆಟಗಾರ

ಜಕಾರ್ತಾ: ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ ವೇಳೆ ಚೀನಾದ‌ ಆಟಗಾರನೊಬ್ಬ ಆಟವಾಡುತ್ತಲೇ ಕುಸಿದುಬಿದ್ದು ಹೃದಯ ಸ್ತಂಭನಗೊಂಡು ಸಾವನ್ನಪ್ಪಿದ ಮನಕಲಕುವ ಘಟನೆ ನಡೆದಿದೆ. ಚೀನಾದ ಆಟಕಾರ ಜಾಂಗ್‌ ಝಿಜಿ (17) ಆಟದ ಮೈದಾನದಲ್ಲೇ ಕೊನೆಯುಸಿರೆಳೆದಿದ್ದಾನೆ.
ಜಪಾನ್‌ನ ಕುಸುಮ ಕವಾನೊ ವಿರುದ್ಧ ಬ್ಯಾಡ್ಮಿಂಟನ್‌ ಆಟ ಆಡುತ್ತಿದ್ದ ವೇಳೆ ಇವರಿಗೆ ಹಠಾತ್‌ ಹೃದಯ ಸ್ತಂಭನವಾಗಿದೆ. ಇಬ್ಬರೂ 1-1 ಅಂಕಗಳಿಂದ ಸರಿಸಮಾನಾಗಿ ಆಡುತ್ತಿದ್ದರು. ಈ ವೇಳೆ ಜಾಂಗ್‌ ಝಿಜಿ ಏಕಾಏಕಿ ಮೈದಾನದ ಮೇಲೆ ಬಿದ್ದಿದ್ದಾರೆ. ಮೈದಾನದಲ್ಲಿ ಬಿದ್ದು ಒದ್ದಾಡುತ್ತಿದ್ದರೂ ತಕ್ಷಣಕ್ಕೆ ಯಾರೂ ಬರಲಿಲ್ಲ ಎನ್ನುವುದು ಈ ಕುರಿತ ವಿಡಿಯೊದಲ್ಲಿ ದಾಖಲಾಗಿದೆ.
ಒಬ್ಬರು ತಕ್ಷಣ ಧಾವಿಸಲು ಯತ್ನಿಸಿದರಾದರೂ ಅಂಪೈರ್‌ ನಿರ್ಣಯದ ಮೇರೆಗೆ ವಾಪಾಸ್‌ ಹೋದರು. ಬಳಿಕ ವೈದ್ಯಕೀಯ ತಂಡ ಆಗಮಿಸಿ ಆಟಗಾರನನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ದಿತು. ಆದರೆ ಅಷ್ಟೊತ್ತಿಗೆ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ. ಪದಕ ಪ್ರದಾನ ಸಮಾರಂಭದ ವೇಳೆ ಕಣ್ಣೀರು ಸುರಿಸುತ್ತಲೇ ಚೀನಾದ ಆಟಗಾರರು ಪ್ರಶಸ್ತಿ ಸ್ವೀಕರಿಸಿದರು. ವೇದಿಕೆ ಮೇಲೆ ಜಾಂಗ್‌ ಝಿಜಿ ಗೌರವಾರ್ಥ ಅವರ ಜೆರ್ಸಿ ಪ್ರದರ್ಶನ ಮಾಡಲಾಯಿತು.

ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ…

Sneha Mordani on X: “#Breaking 17-year-old Chinese badminton player Zhang Zhijie dies of cardiac arrest after collapsing on the court during a tournament in Indonesia. https://t.co/nCROIJiFDH” / X

RELATED ARTICLES
- Advertisment -
Google search engine

Most Popular