Monday, December 2, 2024
Homeಅಂತಾರಾಷ್ಟ್ರೀಯನಮಾಜ್‌ ವೇಳೆ ಎಲ್ಲಾ ದೇವಸ್ಥಾನ, ಮಂದಿರಗಳ ಮೈಕ್‌ 5 ನಿಮಿಷ ಮುಂಚಿತವಾಗಿ ಬಂದ್‌ ಆಗ್ಬೇಕು |...

ನಮಾಜ್‌ ವೇಳೆ ಎಲ್ಲಾ ದೇವಸ್ಥಾನ, ಮಂದಿರಗಳ ಮೈಕ್‌ 5 ನಿಮಿಷ ಮುಂಚಿತವಾಗಿ ಬಂದ್‌ ಆಗ್ಬೇಕು | ಬಾಂಗ್ಲಾ ಸರ್ಕಾರದ ಆದೇಶ

ಢಾಕಾ: ಅಜಾನ್ ಮತ್ತು ನಮಾಜ್ ವೇಳೆ ಎಲ್ಲಾ ದೇವಸ್ಥಾನ, ಮಂದಿರ ಹಾಗೂ ಪ್ರಾರ್ಥನಾಲಯಗಳ ಮೈಕ್ ಬಂದ್ ಮಾಡುವಂತೆ ಬಾಂಗ್ಲಾದೇಶದ ಸರ್ಕಾರ ಆದೇಶಿಸಿದೆ. ನಮಾಜ್ ಹಾಗೂ ಆಜಾನ್‍ಗೂ 5 ನಿಮಿಷ ಮೊದಲೇ ಮಂದಿರಗಳ ಮೈಕ್ ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹೊಸದಾಗಿ ರಚಿನೆಯಾಗಿರುವ ಮಧ್ಯಂತರ ಸರ್ಕಾರ, ದುರ್ಗಾ ಪೂಜೆ ಸಂಬಂಧಿತ ಚಟುವಟಿಕೆಗಳು, ವಿಶೇಷ ಸಂಗೀತ ಕಾರ್ಯಕ್ರಮವನ್ನು ನಮಾಜ್ ಹಾಗೂ ಆಜಾನ್ ವೇಳೆ ನಿಲ್ಲಿಸುವಂತೆ ಹಿಂದೂ ಸಮುದಾಯಕ್ಕೆ ಸೂಚಿಸಿದೆ. ದೇಶದಲ್ಲಿ ವಾರ್ಷಿಕ ದುರ್ಗಾ ಪೂಜೆ ಆಚರಣೆಗಳಿಗೆ ತಯಾರಿ ನಡೆಸುತ್ತಿರುವಾಗ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಸೂಚನೆ ನಿಡಲಾಗಿದೆ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ಹಿಂದೂ ಸಮುದಾಯದ ಅತಿ ದೊಡ್ಡ ಧಾರ್ಮಿಕ ಹಬ್ಬವಾದ ದುರ್ಗಾ ಪೂಜೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕುರಿತು ಉನ್ನತ ಮಟ್ಟದ ಸಭೆಯ ನಂತರ ಈ ಸೂಚನೆ ನಿಡಲಾಗಿದೆ. ಈ ಮಾರ್ಗಸೂಚಿಗಳನ್ನು ಅನುಸರಿಸಲು ಮಂದಿರಗಳ ಸಮಿತಿಗಳು ಒಪ್ಪಿಕೊಂಡಿವೆ ಎಂದು ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಂಡಿ ಜಹಾಂಗೀರ್ ಆಲಂ ಚೌಧರಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular