ಬಹ್ರೇನ್: ಗುರು ಸೇವಾ ಸಮಿತಿ ಬಹ್ರೇನ್ ಬಿಲ್ಲವಾಸ್ ಮತ್ತು ಕರ್ನಾಟಕ ಸೋಶಿಯಲ್ ಕ್ಲಬ್ ವತಿಯಿಂದ ಸೆ.6ರಂದು ಗಣೇಶ ಚತುರ್ಥಿ ಸಂಭ್ರಮಾಚರಣೆ ನಡೆಯಲಿದೆ. ಪ್ರಥಮ ಬಾರಿಗೆ ಗಲ್ಫ್ ರಾಷ್ಟದಲ್ಲಿ ಕರ್ನಾಟಕ ಸೋಶಿಯಲ್ ಕ್ಲಬ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸೆ.6ರಂದು ಬೆಳಿಗ್ಗೆ 7.30ಕ್ಕೆ ಗಣಪತಿ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಭಜನೆ ನಡೆಯಲಿದೆ. ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಅನ್ನ ಸಂತರ್ಪಣೆ ನಡೆಯಲಿದೆ. 3ರಿಂದ 6 ಗಂಟೆವರೆಗೆ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. 6ರಿಂದ ಮಂಗಳಾರಾತಿ ನಡೆಯಲಿದ್ದು, ನಂತರ ವಿಸರ್ಜನೆ ನಡೆಯಲಿದೆ.