Monday, January 20, 2025
Homeಸಾಹಿತ್ಯಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ಸಮಾರಂಭ 2025 ಕಾರ್ಯಕ್ರಮ

ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ಸಮಾರಂಭ 2025 ಕಾರ್ಯಕ್ರಮ

ಶಿಕ್ಷಕರಾಗಿ, ಕಲಾರಾಧಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಬಹುಮುಖ ವ್ಯಕ್ತಿತ್ವದ ಬೈಕಾಡಿ ಜನಾರ್ದನ ಆಚಾರ್ ಇವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ. ಪ್ರಬುದ್ಧ ಶಿಕ್ಷಕರಾಗಿದ್ದಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಿ, ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ಮತ್ತು ಬೆಂಬಲ ನೀಡುತ್ತಿದ್ದರು. ಧ್ಯೇಯೋದ್ದೇಶಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ‘ಬೈಕಾಡಿ ಪ್ರತಿಷ್ಠಾನ’ ಪ್ರಾರಂಭಗೊಂಡಿತು. ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಿದ ‘ಬೈಕಾಡಿ ಪ್ರತಿಷ್ಠಾನ’ ಪ್ರತೀ ವರ್ಷ ಬೈಕಾಡಿಯವರ ಹುಟ್ಟುಹಬ್ಬದಂದು ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ’ಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ನೀಡುತ್ತಾ ಬಂದಿದೆ. 5ನೇ ವರ್ಷದ ಈ ಪ್ರಶಸ್ತಿಯನ್ನು ಸಾಹಿತಿ, ಸಮಾಜ ಸೇವಕಿ ಹಾಗೂ ವಿಶ್ರಾಂತ ಅಧ್ಯಾಪಕಿ ‘ ಕೆ. ಎ. ರೋಹಿಣಿ’ ಇವರು ಸ್ವೀಕರಿಸಲಿದ್ದಾರೆ.


ಜನವರಿ 5, 2025 ಆದಿತ್ಯವಾರ, ಸಂಜೆ 5ಕ್ಕೆ, ‘ತುಳು ಭವನ’ದ ಪ್ರೊ. ಅಮೃತ ಸೋಮೇಶ್ವರ ಸಭಾಂಗಣ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉರ್ವಸ್ಟೋರ್, ಮಂಗಳೂರು ಇಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು, ಉತ್ತರಾಧಿಕಾರಿಗಳು, ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠ, ನಿಡಸೋಸಿ ಇವರ ದಿವ್ಯ ಸಾನಿಧ್ಯದೊಂದಿಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸೈನಿಕರು ಹಾಗೂ ಮಾಜಿ ಶಾಸಕರು, ಕರ್ನಾಟಕ ವಿಧಾನ ಪರಿಷತ್, ಡಾ. ಎಸ್. ಆರ್. ಹರೀಶ್ ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಸಹಕಾರ ಬ್ಯಾಂಕ್ ನಿ., ಮಂಗಳೂರು, ಗುಂಡುರಾಜು, ರಾಜಾರಾಮ ತೊಗಲು ಬೊಂಬೆ ಮೇಳ, ಹಾಸನ, ಡಾ. ಶ್ವೇತಾ ಮಡಪ್ಪಾಡಿ, ಸಂಸ್ಥಾಪಕರು, ಧ್ವನಿ ಫೌಂಡೇಶನ್, ಮೈಸೂರು ಇವರ ಉಪಸ್ಥಿತಿಯಲ್ಲಿ ಜರಗಲಿದೆ.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಗುಂಡುರಾಜು ಹಾಗೂ ತಂಡ, ಹಾಸನ ಇವರಿಂದ ವಿಶೇಷ ಕಾರ್ಯಕ್ರಮ ‘ತೊಗಲು ಬೊಂಬೆಯಾಟ’ ನಡೆಯಲಿದೆ.

RELATED ARTICLES
- Advertisment -
Google search engine

Most Popular