ಶ್ರೀ ಧೂಮಾವತಿ ದೈವಸ್ಥಾನ ಬೈಲೂರು ಮೂಲ ಮೈಹಿಷಾಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಕಾಲಾವಧಿ ನೇಮೋತ್ಸವ, ಅನ್ನಸಂತರ್ಪಣೆಯು 20-04-2024 ರಂದು ನಡೆಯಲಿದೆ. ಬೆಳಗ್ಗೆ 8.00 ಗಂಟೆಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಗಣಹೋಮ, 25 ಕಲಶಾಭಿಷೇಕ, ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, 10.45 ಕ್ಕೆ ನೇಮೋತ್ಸವದ ಚಪ್ಪರ ಮೂಹೂರ್ತ, 11.00 ಗಂಟೆಗೆ ದೈವದರ್ಶನ, 11.30 ಗಂಟೆಗೆ ಭಂಡಾರ ಇಳಿಯುವುದು, 12.30 ಗಂಟೆಗೆ ಮಹಾ ಅನ್ನಸಂತರ್ಪಣೆ,ರಾತ್ರಿ 9:30ಕ್ಕೆ ಮೂಲ ಮೈಹಿಷಾಂತಾಯ ನೇಮೋತ್ಸವ, ರಾತ್ರಿ 9.00 ಗಂಟೆಗೆ ಧೂಮಾವತಿ, ಬಂಟ ದೈವಗಳ ನೇಮೋತ್ಸವ ಹಾಗೂ ಭಾನುವಾರ ಬೆಳಗ್ಗೆ 4 ಗಂಟೆಗೆ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ.