Saturday, September 14, 2024
Homeರಾಜ್ಯಪಿ.ಆರ್ ಎನ್ .ಅಮೃತ ಭಾರತಿ ವಸತಿ ನಿಲಯ ವಿದ್ಯಾರ್ಥಿಗಳ ಪೋಷಕರ ಬೈಠಕ್

ಪಿ.ಆರ್ ಎನ್ .ಅಮೃತ ಭಾರತಿ ವಸತಿ ನಿಲಯ ವಿದ್ಯಾರ್ಥಿಗಳ ಪೋಷಕರ ಬೈಠಕ್

ಭಾರತೀಯ ಚಿಂತನೆ ಮತ್ತು ಹಿಂದುತ್ವದ ಕಲ್ಪನೆಯನ್ನು , ಸಮರ್ಪಣಾ ಮನೋಭಾವದಿಂದ ಕೂಡಿದ ಮನಸ್ಥಿತಿಯನ್ನು ನಿರ್ಮಿಸಲು ಸಂಸ್ಥೆಯನ್ನು ನಿರ್ಮಿಸಲಾಗಿದೆ. ಮಾನವೀಯತೆಯ ಗುಣ ಮತ್ತು ನೈತಿಕ ಮೌಲ್ಯವನ್ನು ಆಧಾರವಾಗಿಟ್ಟುಕೊಂಡು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದರು . ಅಮೃತ ಭಾರತಿ ವಸತಿ ನಿಲಯದ ಪೋಷಕರ ಸಭೆಯನ್ನು ಉದ್ದೇಶಿಸಿ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ಮಾತನಾಡಿದರು.

ಸಂಸ್ಥೆಯ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ಅಮೃತ ಭಾರತಿ ಪ್ರೌಢಶಾಲಾ ವಸತಿ ನಿಲಯದ ವಿದ್ಯಾರ್ಥಿಗಳ ಪೋಷಕರ ಬೈಠಕ್ ನಡೆಯಿತು. ವೇದಿಕೆಯಲ್ಲಿ ಅಮೃತ ಭಾರತಿ ಟ್ರಸ್ಟಿನ ಸದಸ್ಯರು ಹಾಗೂ ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್, ವಸತಿ ನಿಲಯದ ಮೇಲ್ವಿಚಾರಕರು ಶಂಕರ್ ಸಿಂಗ್ ಮತ್ತು ಶಿವಕುಮಾರ್ ಉಪಸ್ಥಿತರಿದ್ದರು. ನಿರೂಪಣೆ ಮಹೇಶ್ ಹೈಕಾಡಿ. ಪ್ರಾಸ್ತಾವಿಕ ಮಾತು ಅಪರ್ಣಾ ಆಚಾರ್ ನುಡಿದರು.

RELATED ARTICLES
- Advertisment -
Google search engine

Most Popular