ಕೊರಗ ಸಂಘಗಳ ಒಕ್ಕೂಟ ಒಕ್ಕೂಟ(ರಿ) ಕರ್ನಾಟಕ-ಕೇರಳ ಮತ್ತು ಕೊರಗ ಅಭಿವೃದ್ಧಿ ಸಂಘಟನೆ ಬಜಗೋಳಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಕಡಾರಿ ಯಲ್ಲಿ ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆಯ ಅಂಗವಾಗಿ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ವಿ.ಸುರೇಶ್ ನ್ಯಾಯಾವಾದಿಗಳು ಕಾರ್ಕಳ ಇವರು ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ, ದೌರ್ಜನ್ಯ ಹಾಗೂ ಪೋಕ್ಸೋ ಕಾಯಿದೆಯ ಕುರಿತು ಹಾಗೂ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಿರೀಶ್ ರವರು ಆರೋಗ್ಯ ಮತ್ತು ಕಾಯಿಲೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಜಗೋಳಿ ಸಂಘದ ಅಧ್ಯಕ್ಷರಾದ ರವಿ,ಕಾರ್ಯದರ್ಶಿ ವನಿತಾ, ಕೋಶಾಧಿಕಾರಿ ಸುರೇಶ್ ಹಾಗು ಸಮುದಾಯದ ಹಿರಿಯರು ಕಿರಿಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.