Monday, December 2, 2024
Homeಹೆಬ್ರಿಬಜೆ ಡ್ಯಾಂ: ನಿಲಿಸುಗಲ್ಲು ಪತ್ತೆ

ಬಜೆ ಡ್ಯಾಂ: ನಿಲಿಸುಗಲ್ಲು ಪತ್ತೆ

ಹಿರಿಯಡ್ಕ-ಕುಕ್ಕೆಹಳ್ಳಿ ಮಾರ್ಗದಲ್ಲಿರುವ ಸುವರ್ಣ ನದಿಗೆ ಕಟ್ಟಿರುವ ಬಜೆ ಡ್ಯಾಂ (ಕಿರು ಅಣೆಕಟ್ಟು) ಬಳಿ ಬೃಹತ್ ಶಿಲಾಯುಗಕ್ಕೆ ಸೇರುವ ನಿಲಿಸುಗಲ್ಲನ್ನು ಉದಯವಾಣಿ ಪತ್ರಿಕಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಗಣೇಶ್ ನಾಯ್ಕ್ ಚೇರ್ಕಾಡಿ ಮತ್ತು ಸರಕಾರಿ ಪ್ರೌಢಶಾಲೆ-ನಿಡ್ಲೆ ಇಲ್ಲಿನ ಹಿಂದಿ ಅಧ್ಯಾಪಕರಾದ ಗೀತೇಶ್ ಅವರು ಪತ್ತೆ ಮಾಡಿರುತ್ತಾರೆ. ಭೂ ಮೇಲ್ಮೈಯಿಂದ ಸುಮಾರು 6 ಅಡಿ ಎತ್ತರಯಿರುವ ಈ ಕಲ್ಲನ್ನು ಸ್ಥಳೀಯರು “ಗಡಿಕಲ್ಲು” ಎಂದು ಕರೆಯುತ್ತಾರೆ. ಈ ಮೊದಲು ಕ್ಷೇತ್ರಕಾರ್ಯವನ್ನು ಕೈಗೊಂಡಿರುವ ಯು. ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಕೆ. ಶ್ರೀಧರ್ ಭಟ್ ಅವರು ಬೃಹತ್ ಶಿಲಾಯುಗಕ್ಕೆ ಸೇರಿದ ಅನೇಕ ಗುಹಾಸಮಾಧಿಗಳನ್ನು ಮತ್ತು ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗದ ಅವಶೇಷಗಳನ್ನು ಇಲ್ಲಿ ಪತ್ತೆ ಮಾಡಿದ್ದರು. ಆದರೆ ಪ್ರಸ್ತುತ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಇಂತಹ ಅನೇಕ ಪ್ರಾಗೈತಿಹಾಸಿಕ ಅವಶೇಷಗಳು ನಾಶವಾಗಿರುವ ಸಾಧ್ಯತೆಯಿದೆ. ಈಗ ಗುರುತಿಸಿರುವ ಈ ನಿಲಿಸುಗಲ್ಲು ಸುಮಾರು 2000 ವರ್ಷಗಳಷ್ಟು ಪ್ರಾಚೀನವೆಂದು ಅಂದಾಜಿಸಬಹುದೆಂದು ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆಸುಬ್ರಹ್ಮಣ್ಯ ಇಲ್ಲಿನ ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular