ಬಜಪೆಯ 30 ನೇ ವರ್ಷದ ಸಾರ್ವಜನಿಕ ಬಜಪೆ ಶ್ರೀ ಶಾರದೋತ್ಸವ

0
1

ಬಜಪೆ:ಶ್ರೀ ಶಾರದೋತ್ಸವ ಸಮಿತಿ(ರಿ) ಬಜಪೆಯ 30 ನೇ ವರ್ಷದ ಸಾರ್ವಜನಿಕ ಬಜಪೆ ಶ್ರೀ ಶಾರದೋತ್ಸವವು ಅ.2 ರಂದು ಇಲ್ಲಿನ ಕೇಂದ್ರ ಮೈದಾನದ ಬಳಿಯ ಶ್ರೀ ಶಕ್ತಿ ಮಂಟಪದಲ್ಲಿ ಆರಂಭಗೊಂಡಿದ್ದು,ಮಂಗಳವಾರದಂದು ರಾತ್ರಿ ಶ್ರೀ ಶಾರದಾ ಮಾತೆಯ ವಿಸರ್ಜನಾ ಮೆರವಣೆಗೆಯ ಭವ್ಯ ಶೋಭಾಯಾತ್ರೆಯು ವಿಜೃಂಭಣೆಯಿಂದ ಜರುಗಿತು.


ಮೆರವಣೆಗೆಯಲ್ಲಿ ಚೆಂಡೆ,ವಿವಿಧ ಭಜನಾ ತಂಡಗಳಿಂದ ಭಜನೆ,ವಿವಿಧ ಟ್ಯಾಬ್ಲೋಗಳು ನೆರೆದಿದ್ದ ಎಲ್ಲರ ಗಮನ ಸೆಳೆಯಿತು.ಬಜಪೆಯಿಂದ ಸಾಗಿದ ಶ್ರೀ ಶಾರದ ಮಾತೆಯ ವಿಸರ್ಜನಾ ಮೆರವಣೆಗೆಯು ಮರವೂರು ತನಕ ಸಾಗಿ ನಂತರ ಮರವೂರಿನ ಪಲ್ಗುಣೆ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ಈ ಸಂದರ್ಭ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ,ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಭುಜಂಗ ಕುಲಾಲ್, ಗೌರವಾಧ್ಯಕ್ಷರುಗಳಾದ ಗೋಪಾಲ ಸುವರ್ಣ ,ಸುರೇಂದ್ರ ಪೆರ್ಗಡೆ,ಕಾರ್ಯಾಧ್ಯಕ್ಷ ಕೃಷ್ಣರಾಜ್ ಶಾಂತಿನಗರ,ಉಪಾಧ್ಯಕ್ಷರುಗಳಾದ ಪ್ರದೀಪ್ ಸುವರ್ಣ,ಶಂಕರ್ ದಾಸ್ ,ಪ್ರಧಾನ ಕಾರ್ಯದರ್ಶಿ ಯೋಗೀಶ್ ಸುವರ್ಣ,ಕೋಶಾಧಿಕಾರಿ ದುರ್ಗಾಪ್ರಸಾದ್ ಮಡಿವಾಳ,ಸಮಿತಿಯ ಸರ್ವಸದಸ್ಯರುಗಳು,ಸ್ಥಳೀಯ ಜನಪ್ರತಿನಿಧಿಗಳು, ಗಣ್ಯಾತೀಗಣ್ಯರು,ಪ್ರಮುಖರು ಹಾಗೂ ಭಕ್ತಾಧಿಗಳು ಪಾಲ್ಗೊಂಡರು.