ಬಜ್ಪೆ: ಪರಿವರ್ತನಾ ಗ್ರಾಮೀಣ ಸಹಕಾರ ಸಂಘ (ನಿ.), ಬಜಪೆ ಇದರ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಬಜಪೆ ವಿಶ್ವಕರ್ಮ ಸಭಾಭವನದಲ್ಲಿ ಆದಿತ್ಯವಾರ ನಡೆಯಿತು. ಸಹಕಾರ ಸಂಘದ ಸ್ಥಾಪಕ, ಹಾಲಿ ಅಧ್ಯಕ್ಷ ಕೃಷ್ಣಾನಂದ ಡಿ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸ್ವಾತಿ ಅವರು 2023-24ನೇ ಸಾಲಿನ ವರದಿಯನ್ನು ವಾಚಿಸಿ, 3ನೇ ವರ್ಷದಲ್ಲಿ ಸಂಸ್ಥೆ ಲಾಭದಲ್ಲಿ ಮುನ್ನಡೆಯುತ್ತಿರುವುದನ್ನು ಸಭೆಗೆ ತಿಳಿಸಿದರು. ನಿರ್ದೇಶಕಿ ವೈಶಾಲಿಯವರು 2024-25ನೇ ಸಾಲಿನ ಅಂದಾಜು ಬಜೆಟನ್ನು ಮಂಡಿಸಿದರು.
ಕಳೆದ ಸಾಲಿನಲ್ಲಿ ಸಂಘಕ್ಕೆ ಬಂದ ಲಾಭಾಂಶದಿಂದ ನಿಧಿಗಳಿಗೆ ಮೀಸಲಿಟ್ಟು, ಸದಸ್ಯರಿಗೆ 3ನೇ ವರ್ಷದಲ್ಲಿಯೇ ಡಿವಿಡೆಂಟನ್ನು ಮತ್ತು ಸಿಬ್ಬಂದಿಗಳಿಗೆ ಬೋನಸನ್ನು ಅಧ್ಯಕ್ಷ ಕೃಷ್ಣಾನಂದ ಡಿ. ಘೋಷಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಾನಂದ, ನಮ್ಮ ಸಹಕಾರ ಸಂಘವು ಜನರಿಂದ, ಜನರಿಗಾಗಿ ಅರ್ಥಾತ್, ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಪರಿವರ್ತನೆಯ ಉದ್ದೇಶ ಹೊಂದಿದೆ ಎಂದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ನಿರ್ದೇಶಕರುಗಳಾದ ವಿಲಿಯಂ ಲೊಬೋ, ಹರೀಶ್ವರ್, ರುಕ್ಕಯ್ಯ ಅಮೀನ್, ಆಲ್ವಿನ್ ಡಿಸೋಜ, ಕಮಲಾಕ್ಷ ಬಜಾಲ್, ಪದ್ಮನಾಭ ಅಮೀನ್, ವೈಶಾಲಿ, ರೀಶಾ, ಉಷಾ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಸ್ವ ಸಹಾಯ ಗುಂಪುಗಳ ಸೇವಾನಿರತೆಯಾದ ಬೇಬಿಯವರನ್ನು ಗೌರವಿಸಲಾಯಿತು.