Thursday, December 5, 2024
Homeತುಳು ಭಾಷೆಜೈ ತುಳುನಾಡ್ (ರಿ) ಬೆಂಗಳೂರು ವತಿಯಿಂದ ಬಲೆ ತುಳು ಲಿಪಿ ಕಲ್ಪುಗ

ಜೈ ತುಳುನಾಡ್ (ರಿ) ಬೆಂಗಳೂರು ವತಿಯಿಂದ ಬಲೆ ತುಳು ಲಿಪಿ ಕಲ್ಪುಗ

ಜೈ ತುಲುನಾಡ್ (ರಿ.) ಬೆಂಗಳೂರು ಘಟಕದ ನೇತೃತ್ವದಲ್ಲಿ “ಬಲೆ ತುಲು ಲಿಪಿ ಕಲ್ಪುಗ” ಎಂಬ ಕಾರ್ಯಾಗಾರ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಸ್ವಾಗತ್ ಹೋಟೆಲ್ ನಲ್ಲಿ 20 ಅಕ್ಟೋಬರ್ 2024 ನೇ ಭಾನುವಾರ ನಡೆಯಿತು. ಜತೆ ಸಂಘಟನಾ ಕಾರ್ಯದರ್ಶಿ ಕಾಶಿನಾಥ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತೇಜಸ್ ಸುಧಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೈ ತುಲುನಾಡ್ ಬೆಂಗಳೂರು ಘಟಕದ ಅಧ್ಯಕ್ಷರಾದ ಧನಂಜಯ ಆಚಾರ್ಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅದೇ ರೀತಿ ತುಳುಕೂಟ ಬೆಂಗಳೂರಿನ ಸುಂದರ್ ರಾಜ್ ರೈ, ಬೆಂಗಳೂರಿನ ಉದ್ಯಮಿ ಚಂದ್ರಹಾಸ್ ಶೆಟ್ಟಿಗಾರ್, ಜೈ ತುಲುನಾಡ್ ಬೆಂಗಳೂರು ಘಟಕದ ಉಪಾಧ್ಯಕ್ಷರಾದ ನಿಧೀಶ್ ಶೆಟ್ಟಿ ಜೈ ತುಲುನಾಡ್ ಇವರುಗಳು ಅತಿಥಿಗಳಾಗಿ ಆಗಮಿಸಿದ್ದರು .
ಅತಿಥಿಗಳು ತುಲುವಪ್ಪೆಗೆ ಹೂವನ್ನು ಸಮರ್ಪಿಸಿದರು. ಪ್ರಗತಿ ಎಸ್ ತುಲುವಪ್ಪೆಯನ್ನು ಸ್ತುತಿಸಿದರು. ಕಾರ್ಯದರ್ಶಿಗಳಾದ ಅಕ್ಷಯ್ ಆಚಾರ್ಯ ಪ್ರಾಸ್ಥಾವಿಕ ಭಾಷಣ ಮಾಡಿ, ತುಲು ಲಿಪಿಯ ಇತಿಹಾಸ ಮತ್ತು ಜೈ ತುಲುನಾಡ್ ಸಂಘದ ಇತಿಹಾಸ ಹಾಗೂ ಜೈ ತುಲುನಾಡ್ ಸಂಘ ತುಲು ಲಿಪಿಯ ಕುರಿತಾಗಿ ಮಾಡಿರುವ ಕೆಲಸಗಳ ಬಗ್ಗೆ ತಿಳಿಸಿದರು. ಕಾರ್ಯಾಗಾರವನ್ನು ಉದ್ಘಾಟಿಸಿದ ಉದ್ಯಮಿ ತೇಜಸ್ ಸುಧಾಕರ್ ತುಲು ಹಾಗೂ ತುಲು ಲಿಪಿಯ ಬಗೆಗಿನ ಯಾವ ಕೆಲಸಕ್ಕೂ ನನ್ನ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು. ಅತಿಥಿ ಸುಂದರ್ ರಾಜ್ ರೈ ಮಾತನಾಡಿ ತುಲುನಾಡಿನವರು ಭಾಷಾತೀತವಾಗಿ ತುಲುವರಾಗಿದ್ದಾರೆ, ಇದು ಪ್ರತಿಯೊಬ್ಬ ತುಲುನಾಡಿನವನ ಹೃದಯದಲ್ಲಿದೆ ಎಂದರು. ಇನ್ನೊಬ್ಬ ಅತಿಥಿಗಳಾದ ಸ್ವಾಗತ್ ಹೋಟೆಲ್ ನ ಮಾಲಕರಾದ, ಚಂದ್ರಹಾಸ ಶೆಟ್ಟಿಗಾರ್ ಸಂಘದ ಯುವಕರಲ್ಲಿರುವ ಉತ್ಸಾಹವನ್ನು ಹೊಗಳಿದರು. ಉಪಾಧ್ಯಕ್ಷರಾದ ನಿಧೀಶ್ ಶೆಟ್ಟಿ ಮಾತನಾಡಿ ಜೈ ತುಲುನಾಡ್ ಸಂಘದ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಧನಂಜಯ ಆಚಾರ್ಯ ಮಾತನಾಡಿ ಜೈ ತುಲುನಾಡ್ (ರಿ.) ಸಂಘದವರು ಮಾಡುವ ಎಲ್ಲಾ ಕಾರ್ಯ ಗಳಿಗೂ ನಿಮ್ಮೆಲ್ಲರ ಬೆಂಬಲ ಬೇಕೆಂದು ಹೇಳಿದರು.
ಅತಿಥಿಗಳು ತುಲು ಲಿಪಿಯಲ್ಲಿ ಹೆಸರು ಬರೆಯುವ ಮೂಲಕ ಲಿಪಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಪೂರ್ಣದಕ್ಷ, ಶರತ್ ಕೊಡವೂರು, ರಂಜನ್ ಎಸ್ ವೈ, ಅಕ್ಷಯ್ ಆಚಾರ್ಯ ತುಲು ಲಿಪಿ ಶಿಕ್ಷಕರಾಗಿದ್ದರು. ಈ ಲಿಪಿ ಕಾರ್ಯಾಗಾರದಲ್ಲಿ 75 ಕ್ಕಿಂತಲೂ ಹೆಚ್ಚಿನ ಜನ ಬಂದಿದ್ದರು..
ತುಳುನಾಡ ಜವನೆರ್ ಬೆಂಗಳೂರು (ರಿ.) ಸಂಘದವರು ಹಾಗೆಯೇ SMS ಫ್ಯಾಮಿಲಿ ಬೆಂಗಳೂರು ಇದರ ಸದಸ್ಯರು ಭಾಗವಹಿಸಿದ್ದರು. ಅದೇ ರೀತಿ “ಲೈಟ್ ಹೌಸ್ ಕ್ರಿಯೇಷನ್ಸ್” ನವರು ಈ ಕಾರ್ಯಕ್ರಮಕ್ಕೆ ತುಂಬಾ ಸಹಕಾರ ನೀಡಿದ್ದಾರೆ.
ಜೈ ತುಲುನಾಡ್ (ರಿ.) ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಶರತ್ ಕೊಡವೂರು, ಜತೆ ಕಾರ್ಯದರ್ಶಿಗಳಾದ ಶಕುಂತಲ, ಖಜಾಂಚಿಗಳಾದ ಅನುದೀಪ್ ಎಲ್ಲೂರು, ಜತೆ ಖಜಾಂಚಿಗಳಾದ ಪ್ರಗತಿ ಎಸ್., ಜತೆ ಸಂಘಟನಾ ಕಾರ್ಯದರ್ಶಿಗಳಾದ ಕಾಶಿನಾಥ, ಕಾರ್ಯಕಾರಿ ಸಮಿತಿಯ ಮಹೇಶ್ ಕುಲಾಲ್, ರಂಜನ್ ಎಸ್ ವೈ, ಸದಸ್ಯರಾದ ಗುರು ದೇವಾಡಿಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು..
ಸುಧೀರ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು . ಸ್ಥಾಪಕ ಸಮಿತಿಯ ಸದಸ್ಯರಾದ ಸುಮಂತ್ ಹೆಬ್ರಿ ಧನ್ಯವಾದ ಸಮರ್ಪಿಸಿದರು.

RELATED ARTICLES
- Advertisment -
Google search engine

Most Popular