ಮಹಾಜನ ಸಂಸ್ಕೃತ ಕಾಲೇಜು ಹಾಗೂ ಪ್ರೌಢಶಾಲೆ ನೀರ್ಚಾಲು ಪೆರಡಾಲ ಇವರ ಆಶ್ರಯದಲ್ಲಿ ಜೈ ತುಲುನಾಡ್ (ರಿ) ಕಾಸ್ರೋಡು ವಲಯ ಸಮಿತಿಯ ವತಿಯಿಂದ ಬಲೆ ತುಲು ಲಿಪಿ ಕಲ್ಪುಗ ಕಾರ್ಯಾಗಾರವು ನಡೆಯಿತು. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತುಲು ಲಿಪಿ ಕಲಿತು ಪರೀಕ್ಷೆ ಬರೆದರು.ತಾ.10-12-2024ರಂದು ಪರೀಕ್ಷೆಯಲ್ಲಿ ಉತ್ತಿರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, 99 ಅಂಕಗಳನ್ನು ಪಡೆದು ಶಾನ್ವಿ ವಿ ಪ್ರಥಮ, 98 ಅಂಕಗಳನ್ನು ಪಡೆದು ಸಾಹಿತ್ಯ ವಿ ರೈ ದ್ವಿತೀಯ, ಹಾಗೂ 97 ಅಂಕಗಳನ್ನು ಪಡೆದು ಭೂಮಿಕಾ ಮತ್ತು ದೀಕ್ಷಿತ ಎಂ ತ್ರಿತೀಯ ಸ್ಥಾನಗಳನ್ನು ಪಡೆದರು.
ಕಾಸರಗೋಡಿನಲ್ಲಿ ಶಾಲೆಯಲ್ಲಿ ತುಲು ಲಿಪಿಯನ್ನು ಪ್ರಪ್ರಥಮವಾಗಿ ಕಲಿಸಿದ ಹೆಗ್ಗಳಿಕೆಯು ಮಹಾಜನ ಸಂಸ್ಕೃತ ಕಾಲೇಜು ನಿರ್ಚಾಲುವಿಗೆ ಸಲ್ಲುತ್ತದೆ ಎಂದು ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀಯುತ ಸುಬ್ರಹ್ಮಣ್ಯ ಕೆದಿಲಾಯರು ಪ್ರಮಾಣ ಪತ್ರ ವಿತರಿಸಿ ಸಂತಸ ವ್ಯಕ್ತಪಡಿಸಿದರು.ತುಲು ಲಿಪಿ ಅಧ್ಯಾಪಕಿ,ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷರೂ ಆದ ಶ್ರೀಮತಿ ವಿನೋದ್ ಪ್ರಸಾದ್ ರೈ, ಕಾಸರಗೋಡು ವಲಯ ಸಮಿತಿಯ ಸದಸ್ಯರು ಹಾಗೂ ತುಲು ಲಿಪಿ ಬ್ರಹ್ಮನೆಂದು ಖ್ಯಾತಿ ಪಡೆದ ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಪುತ್ರ ವಿಜಯರಾಜ ಪುಣಿಂಚತ್ತಾಯ ಹಾಗೂ ಶಾಲಾ ಅಧ್ಯಾಪಕಿ ಶ್ರೀಮತಿ ಶೈಲಜಾ ಟೀಚರ್ ಉಪಸ್ಥಿತರಿದ್ದರು.