ಶ್ರೀ ಕ್ಷೇತ್ರ ಕಾಂತಾವರ ಜಾತ್ರಾಮಹೋತ್ಸವ, ರಥೋತ್ಸವ ದಿನ ಜೈ ತುಳುನಾಡು ಸಂಘಟನೆಯ, ಗೆಳೆಯರ ಬಳಗ ಸಹಯೋಗದಿಂದ ಆಯೋಜಿಸಲಾದ ಬಲೆ ತುಳು ಲಿಪಿಟ್ ಪುದರ್ ಬರೆಕ ಕಾರ್ಯಕ್ರಮ ಶ್ರೀ ಕ್ಷೇತ್ರದ ಧರ್ಮದರ್ಶಿಯರು,ಮತ್ತು ಕುಟುಂಬಸ್ಥರು ಉದ್ಘಾಟಿಸಿ,ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆಯಲು ಕಲಿತು ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ಮುಂದಿನ ದಿನದಲ್ಲಿ ಶ್ರೀ ಕ್ಷೇತ್ರದಲ್ಲಿ ತುಳು ಲಿಪಿ ಕಲಿಯಲು ತರಬೇತಿ ನೀಡುವ ಶಿಬಿರ ಮಾಡುವ ಉದ್ದೇಶ ತುಳುನಾಡ ಸಂಘಟನೆಯದ್ದು, ಮುಂದಿನ ದಿನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೂ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ , ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಮಾಡುವ ಭರವಸೆ ಸಿಕ್ಕಿರುವುದು ತುಳುವರು ಹೆಮ್ಮೆ ಪಡುವ ವಿಚಾರ. ಆದಷ್ಟು ಬೇಗ ತುಳು ರಾಜ್ಯದ ಎರಡನೇ ಭಾಷೆ ಆಗಲಿ ಎಂದು ಹಾರೈಸಿದರು.