ಶ್ರೀವಿಷ್ಣು ಯುವಶಕ್ತಿ ಬಳಗ(ರಿ.) ಮಜ್ಜಾರಡ್ಕ ಮತ್ತು ಜೈ ತುಲುನಾಡ್ (ರಿ.) ಸಂಘಟನೆ ಇದರ ವತಿಯಿಂದ ನಡೆದ “ಬಲೆ ತುಲು ಲಿಪಿ ಕಲ್ಪುಗ” ಕಾರ್ಯಕ್ರಮದ ತುಲು ಲಿಪಿ ಪರೀಕ್ಷೆಯು ಆಗಸ್ಟ್ 4 ರಂದು ನಡೆದಿದ್ದು ಫಲಿತಾಂಶವು ಆಗಸ್ಟ್ 13ರಂದು ಪ್ರಕಟವಾಯಿತು. ತುಲು ಲಿಪಿ ಪರೀಕ್ಷೆಯಲ್ಲಿ ಸಮೃದ್ಧಿ ರೈ ದೇರ್ಲ (99 ಅಂಕ) ಪ್ರಥಮ ಆದ್ಯಾ ಆರ್.ಜೆ ಗೋಳ್ತಿಲ(98 ಅಂಕ) ಮತ್ತು ನಿಶ್ಮಿತಾ ಮಜ್ಜಾರ್(98 ಅಂಕ) ದ್ವಿತೀಯ ಮತ್ತು ಕೆ.ಲಿಷ್ಮಾ(90 ಅಂಕ) ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ತುಲು ಲಿಪಿ ತರಗತಿಯನ್ನು ಜೈ ತುಲುನಾಡ್(ರಿ.) ಸಂಘಟನೆ ಕೇಂದ್ರ ಸಮಿತಿಯ ಜೊತೆ ಸಂಘಟನಾ ಕಾರ್ಯದರ್ಶಿ ಮತ್ತು ತುಲು ಲಿಪಿ ಶಿಕ್ಷಕಿ ಚಿತ್ರಾಕ್ಷಿ ಮುಗೇರ ತೆಗ್ಗು ನಡೆಸಿದರು.