
ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಿರುವ ಬಹುರೂಪಿ ಸಾಧಕ, ಯಕ್ಷ ಗುರು ಪ್ರಸ್ತುತ ಬನ್ನಡ್ಕದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕ ಕೆ. ವೆಂಕಟರಾಜ ಯಳಚಿತ್ತಾಯರಿಗೆ ಸರಣಿಯ 16ನೇ ಸನ್ಮಾನವನ್ನು ನೀಡಿ ಗೌರವಿಸಲಾಯಿತು..ರಾಘವೇಂದ್ರ ಭಂಡಾರ್ಕಾರ್ ಸನ್ಮಾನ ಪತ್ರ ವಾಚಿಸಿದರು.
ವೇದಿಕೆಯಲ್ಲಿ ಎಂ ದಯಾನಂದ ಪೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಕೆ. ಶ್ರೀಪತಿ ಭಟ್, ಲಾಡಿ ನಾಗ ಬ್ರಹ್ಮ ಕ್ಷೇತ್ರದ ಆಡಳಿತ ಮೊಕ್ತೇಷಶರ, ಉಪಸ್ಥಿತರಿದ್ದರು.
ಶ್ರೀಗೌರಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಅತಿಥಿಗಳಿಗೆ ಕೆ.ಎನ್. ಭಟ್ ಶಿರಾಡಿಪಾಲ್ ರಚಿತ “ನವನಿಧಿ” ಪುಸ್ತಕ ಮತ್ತು ಅವರ ಪುತ್ರಿ ಅನುಪಮಾ ಚಿಪ್ಳೂಣಕರ್ ಬರೆದಿರುವ “ಅಮ್ಮ” ಪುಸ್ತಕಗಳನ್ನು ನೀಡಿ ಗೌರವಿಸಿದರು. ವಿಜೇತಾ ಕಾಮತ್ ವಂದಿಸಿದರು.
