ಮುಲ್ಕಿ:ಗ್ರಾಮೀಣ ಭಾಗದ ಜನಪ್ರಿಯ ಕ್ರೀಡೆಯಾದ ಕರಿಯ ದೇಸಿಂಗ ಬೊಳಿಯ ಕಂಬಳ ಬಳ್ಕುಂಜೆಯಲ್ಲಿ ಎ. 5 ಮತ್ತು 6 ರಂದು ನಡೆಯಲಿದ್ದು ಕಂಬಳವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಕುಮಾರ್ ಹೆಗ್ಡೆ ಹೇಳಿದರು.
ಅವರು ಬಳ್ಕುಂಜೆ ಲೋಬೋ ಸಭಾಂಗಣದಲ್ಲಿ, ಕಂಬಳ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಂಬಳ ಸಮಿತಿಯ ಅಧ್ಯಕ್ಷೆ ಬಳ್ಳುಂಜೆಗುತ್ತು ಮಲ್ಲಿಕಾ ಶೆಟ್ಟಿ ಅಧ್ಯಕ್ಷೆಯನ್ನು ವಹಿಸಿದ್ದರು. ಕೊಳಚೂರು ಕೊಂಡೋಟ್ಟು ಸುಕುಮಾರ್ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ಕೊಟ್ನಾಯಗುತ್ತು, ಉಳೆಪಾಡಿ ಬಾಲಕೃಷ್ಣ ಶೆಟ್ಟಿ, ಉಳೆಪಾಡಿ ಚಿತ್ತರಂಜನ್ ಶೆಟ್ಟಿ, ಹಿರಿಯರಾದ ಪ್ರಭಾಕರ ಪೂಂಜಾ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ, ಕವತ್ತಾರು ಶರತ್ ಅಜಿಲ, ಕೃಷ್ಣ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪ್ರಸಾದ್ ಶೆಟ್ಟಿ ಪಡಲ, ಲಾನ್ಸಿ ಡಿ ಸೋಜಾ, ಪ್ರಸಾದ್ ಶೆಟ್ಟಿ ,ಬಳ್ಕುಂಜೆ ರಂಜನ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಗಣೇಶ್ ಶೆಟ್ಟಿ ಇನ್ನಾ, ನೆಲ್ಸನ್ ಲೋಬೋ ಬಳ್ಕುಂಜೆ ಮತ್ತಿತರರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ಸಂಕಲಕರಿಯ ಸ್ವಾಗತಿಸಿದರು. ದಿನಕರ ಶೆಟ್ಟಿ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು.