ಪುಣೆ: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಿದ್ದು, ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಶೌರ್ಯ ಎಂದು ಗುರುತಿಸಲಾಗಿದೆ.
ಸ್ನೇಹಿತರೊಂದಿಗೆ ಶೌರ್ಯ ಆಡುತ್ತಿದ್ದ. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಶೌರ್ಯನ ಎಸೆತಕ್ಕೆ ಬ್ಯಾಟ್ಸ್ ಮ್ಯಾನ್ ಬಲವಾಗಿ ಬ್ಯಾಟ್ ಬೀಸಿದ್ದಾನೆ. ಚೆಂಡು ನೇರವಾಗಿ ಶೌರ್ಯನ ಖಾಸಗಿ ಅಂಗಕ್ಕೆ ಬಿದ್ದಿದೆ. ಚೆಂಡು ಬಿದ್ದ ಏಟಿಗೆ ತಡೆದುಕೊಳ್ಳಲಾಗದೆ ಶೌರ್ಯ ಅಲ್ಲೇ ಕುಸಿದುಬಿದ್ದಿದ್ದಾನೆ.
ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ಈ ಆಟದ ಆಘಾತಕಾರಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.