Tuesday, March 18, 2025
HomeUncategorizedಬಲ್ಲಾಡಿ ಚಂದ್ರಶೇಖರ ಭಟ್ ರಿಗೆ 'ರಾಜ್ಯಮಟ್ಟದ ಶಿಕ್ಷಕ ರತ್ನ "ಪ್ರಶಸ್ತಿ ಪ್ರದಾನ

ಬಲ್ಲಾಡಿ ಚಂದ್ರಶೇಖರ ಭಟ್ ರಿಗೆ ‘ರಾಜ್ಯಮಟ್ಟದ ಶಿಕ್ಷಕ ರತ್ನ “ಪ್ರಶಸ್ತಿ ಪ್ರದಾನ


ಹೆಬ್ರಿ :ಭಾರತೀಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಕಲಾ ಸಂಕುಲ ಸಂಸ್ಥೆ (ರಿ.)ರಾಯಚೂರು ಇದರ ವತಿಯಿಂದ ಸೆಪ್ಟೆಂಬರ್ 8 ರಂದು ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ -2024 ರಲ್ಲಿ ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ರಿಗೆ “ರಾಜ್ಯಮಟ್ಟದ ಶಿಕ್ಷಕ ರತ್ನ “ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಶೈಕ್ಷಣಿಕ, ಧಾರ್ಮಿಕ,ಸಾಹಿತ್ಯಿಕ, ಸಂಘಟನಾ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರ ಸಾಧನೆಯನ್ನು ಗುರುತಿಸಿ ಈಗಾಗಲೇ ಹೆಬ್ರಿಯ ಚಾಣಕ್ಯ ಕಲ್ಚರಲ್ ಹಾಗೂ ಎಜುಕೇಶನ್ ಅಕಾಡೆಮಿ ವತಿಯಿಂದ ಉಡುಪಿ ಜಿಲ್ಲಾ ಅತ್ಯುತ್ತಮ ಚಾಣಕ್ಯ ಶಿಕ್ಷಕ ಪ್ರಶಸ್ತಿ -2022,ಉಡುಪಿಯ ಆದರ್ಶ ಆಸ್ಪತ್ರೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ -2023,ನೇತಾಜಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ರಾಜ್ಯ ವಿಭೂಷಣ ಪ್ರಶಸ್ತಿ -2024 ನೀಡಿ ಗೌರವಿಸಿದೆ. ತಾಲೂಕಿನ ವಿವಿಧ ಸಂಘಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಸಂಪನ್ಮೂಲ ಶಿಕ್ಷಕರು, ತರಬೇತುದಾರರು, ಉತ್ತಮ ಸಂಘಟಕರು, ಉತ್ತಮ ಕಾರ್ಯಕ್ರಮ ನಿರೂಪಕರು ಆಗಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿ, ಮಾರ್ಗದರ್ಶಕರಾಗಿ, ಪದಾಧಿಕಾರಿಗಳಾಗಿ ದುಡಿಯುತ್ತಿದ್ದಾರೆ.ರಾಯಚೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಶಸ್ತಿ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್. ಎಸ್. ಬೋಸುರಾಜು ನೆರವೇರಿಸಿ, ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು.. ವಿಶೇಷ ಅತಿಥಿಗಳಾಗಿ ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಗಣ್ಯರಾದ ರಾಯಚೂರು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷರಾದ ಡಾ. ಶರಣಬಸವ ಪಾಟೀಲ್ ಜೋಳದಡಗಿ,,ರಾಯಚೂರಿನ ಸಮಾಜಸೇವಕರಾದ ಚನ್ನಬಸಪ್ಪ,ಕಿರುತೆರೆ ನಟಿ ಡಾ. ರಜನಿ ಡಿ.,ಮಂಗಳೂರು ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫಿಜಾ, ಖ್ಯಾತ ನರರೋಗ ತಜ್ಞರಾದ ವಿಜಯಶಂಕರ್, ಶಿಕ್ಷಕಿ ಸಂಗೀತಾ ಶರ್ಮಾ, ಉಡುಪಿಯ ಖ್ಯಾತ ಸ್ಯಾಕ್ಸೋಫೋನ್ ಕಲಾವಿದೆ ಭಾರತಿ ಗೋಪಾಲ್,ಕಲಾ ಸಂಸ್ಥೆಯ ಅಧ್ಯಕ್ಷರಾದ ರೇಖಾ ಬಡಿಗೇರ್ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular