ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಎಸ್.ಎಸ್.ಕೆ. ಸಮಾಜದ ಜಗದಂಬಾ ದೇವಸ್ಥಾನದ ಆವರಣದ ಮುಂದೆ ಕುಂಕುಮ ಇಲ್ಲದೇ ಪ್ರವೇಶ ಇಲ್ಲ ಎಂದು ಬೋರ್ಡ್ ಹಾಕಲಾಗಿದೆ. ಈ ವಿಚಾರ ಈಗ ಹೊಸ ಚರ್ಚೆ ಹುಟ್ಟುಹಾಕಿದೆ.
ಸನಾತನ ಹಿಂದೂ ಧರ್ಮದ ಜಾಗೃತಿಗಾಗಿ ದೇವಾಲಯದ ಟ್ರಸ್ಟ್ ಹೊಸ ಅಭಿಯಾನ ಆರಂಭಿಸಿದೆ. ಕುಂಕುಮ ಹಚ್ಚಿಕೊಳ್ಳದೇ ದೇವಸ್ಥಾನಕ್ಕೆ ಪ್ರವೇಶ ಕೊಡುತ್ತಿಲ್ಲ. ದೇವಸ್ಥಾನದ ಪ್ರವೇಶ ದ್ವಾರದ ಎಡ ಮತ್ತು ಬಲ ಭಾಗದಲ್ಲಿ ನಾಮಫಲಕ ಅಳವಡಿಸಿ ಕ್ಯಾಂಪೇನ್ ಮಾಡಲಾಗುತ್ತಿದೆ.
ಸೋಮವಂಶ ಕ್ಷತ್ರೀಯ ಸಮಾಜದಿಂದ ಹಿಂದೂ ಧರ್ಮದ ಕುರಿತು ಜಾಗೃತಿ ಮೂಡಿಸುತ್ತಿದೆ. ನಮ್ಮ ಹಿಂದೂ ಧರ್ಮದ ಸಂಕೇತವೇ ತಿಲಕ, ನಮ್ಮ ಮುಂದಿನ ಪೀಳಿಗೆ ಯುವಕರಿಗೆ ಜಾಗೃತಿಗಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಟ್ರಸ್ಟ್ ಹೇಳಿದೆ. ಇದು ಚರ್ಚೆಗೂ ಕಾರಣವಾಗಿದೆ.