Tuesday, April 29, 2025
Homeಬಂಟ್ವಾಳಬಂದಾರು : ಫೆ 08 ಮತ್ತು 09 ಬಂದಾರು ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ...

ಬಂದಾರು : ಫೆ 08 ಮತ್ತು 09 ಬಂದಾರು ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನ ವಾರ್ಷಿಕ ಕಾಲಾವಧಿ ನೇಮೋತ್ಸವ

ಬಂದಾರು : ಬಂದಾರು ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನ ವಾರ್ಷಿಕ ಕಾಲಾವಧಿ ನೇಮೋತ್ಸವ ಫೆ 08 ಮತ್ತು 09 ರಂದು ನಡೆಯಲಿದೆ.

ಫೆ 01 ರಂದು ಬೆಳಗ್ಗೆ ಗೊನೆ ಮುಹೂರ್ತ ನೆರವೇರಿದ್ದು, ಫೆ 08 ಶನಿವಾರ ಬೆಳಗ್ಗೆ 9.00 ಗಂಟೆಗೆ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನ ಮುದ್ಯದ ಅರ್ಚಕರಾದ ಶ್ರೀ ಕೃಷ್ಣ ಪ್ರಸಾದ ಉಡುಪರ ನೇತೃತ್ವದಲ್ಲಿ ಸ್ಥಳ ಸುದ್ದಿ, ನವಕ ಕಲಶ, ಗಣ ಹವನ, ದೈವಗಳಿಗೆ ಪರ್ವ, ಇತ್ಯಾದಿ, ಹಾಗೂ ಅದೇ ದಿನ ರಾತ್ರಿ 10.00 ಗಂಟೆಗೆ ಬಂದಾರು ಕೆಲೆಂಜಿಮಾರು ಬಳಿಯಿಂದ ದೈವಗಳ ಭಂಡಾರ ಬರುವ ಕಾರ್ಯಕ್ರಮ ನಡೆಯಲಿದೆ. ಫೆ 09 ಆದಿತ್ಯವಾರ ಮುಂಜಾನೆ 4.00 ಗಂಟೆಗೆ ಶಿರಾಡಿ ದೈವ,ಕಲ್ಕುಡ ದೈವ ಹಾಗೂ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಪ್ರಾರಂಭ, ಮಧ್ಯಾಹ್ನ 1.00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಸಾಯಂಕಾಲ 6.00 ಗಂಟೆಗೆ ಬಸ್ತಿನಾಯಕ ನೇಮೋತ್ಸವ ನಡೆಯಲಿದೆ. ಭಕ್ತಾಭಿಮಾನಿಗಳು ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು-ಮನ – ಧನಗಳಿಂದ ಸಹಕರಿಸಿ ಸಿರಿಮುಡಿ ಗಂಧ -ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ನೇಮೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular