Saturday, September 14, 2024
Homeರಾಜ್ಯಬಂದಾರು : ನೂತನ ಬಸ್ ತಂಗುದಾಣ ಲೋಕಾರ್ಪಣೆ

ಬಂದಾರು : ನೂತನ ಬಸ್ ತಂಗುದಾಣ ಲೋಕಾರ್ಪಣೆ

ಬಂದಾರು : ಹಲವಾರು ವರ್ಷಗಳಿಂದ ಬಹುಬೇಡಿಕೆಯ ಬಸ್ ನಿಲ್ದಾಣಕ್ಕೆ ಮುಕ್ತಿ ಸಿಕ್ಕಿದೆ. ಚಾಮುಂಡೇಶ್ವರಿ ಯುವಕ ಮಂಡಲ , ಶ್ರೀ ಕ್ಷೇತ್ರ ಮುಂಡೂರು ಇದರ ಪ್ರಾಯೋಜಕತ್ವದಲ್ಲಿ ಬಂದಾರು ಗ್ರಾಮದ ಮೈರೋಳ್ತಡ್ಕದ ವಿವೇಕಾನಂದನಗರದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಬಸ್ ತಂಗುದಾಣ ಮಾರ್ಚ್ 17 ರoದು ಲೋಕಾರ್ಪಣೆಗೊಂಡಿತು. ಪ್ರಗತಿಪರ ಕೃಷಿಕರು ಕೊಡುಗೈ ದಾನಿ ಶ್ರೀಪತಿ ಭಟ್ ಮುಂಡೂರು ಇವರು ದೀಪ ಬೆಳಗಿಸುವವ ಮೂಲಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮುಂಡೂರು ಧರ್ಮಧರ್ಶಿಗಳಾದ ಆನಂದ ಗೌಡ, ಮೈರೋಳ್ತಡ್ಕ ಶಿವಶಕ್ತಿ ಜನರಲ್ ಸ್ಟೋರ್ ಮಾಲಕರಾದ ಗುರುಪ್ರಸಾದ್ ಕುರಾಯ, ಶ್ರೀ ಚಾಮುಂಡೇಶ್ವರಿ ಯುವಕ ಮಂಡಲ ಅಧ್ಯಕ್ಷರಾದ ಅಶ್ವಥ್ ಗೌಡ, ಕಾರ್ಯದರ್ಶಿ ಉದಯ ಮಿತ್ಯೋಡಿ, ಊರಿನ ಹಿರಿಯರು, ಪ್ರಮುಖರು ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಮಫಲ ಗಿಡ ವಿತರಣೆ ಮಾಡಲಾಯಿತು ಹಾಗೂ ನೂತನ ಬಸ್ ನಿಲ್ದಾಣದ ಬಳಿ ಗಿಡ ನೆಡುವ ಮೂಲಕ ಹಾಗೂ ಬಸ್ ನಿಲ್ದಾಣ ಸುತ್ತ ಪರಿಸರ ಸoರಕ್ಷಣೆಯ ಸಂದೇಶ ಸಾರುವ ಚಿತ್ರಣ ಅಳವಡಿಸಲಾಗಿದೆ.

RELATED ARTICLES
- Advertisment -
Google search engine

Most Popular