ಬಂದಾರು : ಬಂದಾರು ಗ್ರಾಮ ಪಂಚಾಯತ್ ನಲ್ಲಿ 2023-24 ನೇ ಸಾಲಿನ ಜಮಾಬಂದಿ ಹಾಗೂ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಪುಸ್ತಕಕ್ಕೆ ವಿಶ್ವ ದಾಖಲೆಗೆ ರಾಜ್ಯ ಮಟ್ಟದ ಕಾವ್ಯ ಚೇತನ ಪ್ರಶಸ್ತಿ ಪಡೆದ ಚಂದ್ರಹಾಸ ಕುಂಬಾರ ಬಂದಾರು ಮತ್ತು ರಾಜ್ಯ ಮಟ್ಟದ ವೆಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅವಳಿ ಚಿನ್ನದ ಪದಕ ಪಡೆದ ಕು. ತೇಜಶ್ವಿನಿ ಪೂಜಾರಿ ಬಂದಾರು ಇವರಿಗೆ ಆಗಸ್ಟ್ 23 ರಂದು ಪಂಚಾಯತ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಗಫೂರ್, ದ್ವಿತೀಯ ದರ್ಜೆ ಸಹಾಯಕ ಹೆರಾಲ್ಡ್
ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಇವರು ಕಾರ್ಯಕ್ರಮ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪುಷ್ಪಾವತಿ, ಸದಸ್ಯರಾದ ,ಗಂಗಾಧರ ಪೂಜಾರಿ,ಚೇತನ್ ಪಾಲ್ತಿಮಾರ್, ಮೋಹನ್ ಗೌಡ, , ಪರಮೇಶ್ವರಿ ಪುಯಿಲ,ಮಂಜುಶ್ರೀ ಊoತನಾಜೆ ,ಭಾರತಿ ಕೊಡಿಯೇಲು, ಅನಿತಾ ಕುರುಡಂಗೆ, ಸುಚಿತ್ರಾ ಮೂರ್ತಜೆ, ವಿಮಲಾ ತಾರಿದಡಿ, ಗ್ರಾಮಸ್ಥರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು