ಮೂಡುಬಿದಿರೆ: ಬನ್ನಡ್ಕ ನಿವಾಸಿ ಮಮತಾ ಮತ್ತು ದೀಪಕ್ ಇವರ 3 ವರ್ಷದ ಕೌಶಿಲ್ ಎಂಬ ಮಗುವಿಗೆ ಹೃದಯದ ಸಮಸ್ಯೆ ಇರುವುದರಿಂದ ವೈದ್ಯರು 1 ತಿಂಗಳ ಅವಧಿಯೊಳಗೆ ತುರ್ತು ಆಪರೇಷನ್ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಮಾಡಬೇಕಾಗಿ ತಿಳಿಸಿರುತ್ತಾರೆ. ವೈದ್ಯರು ತುರ್ತುಚಿಕಿತ್ಸೆಗೆ 4 ಲಕ್ಷ ಖರ್ಚಾಗುವುದೆಂದು ತಿಳಿಸಿದ್ದಾರೆ. ಅದನ್ನು ಭರಿಸಲು ಈ ಕುಟುಂಬಕ್ಕೆ ಕಷ್ಟವಾಗಿದ್ದು ದಾನಿಗಳ ಸಹಾಯಹಸ್ತವನ್ನು ನೀಡಿ ಸಹಕರಿಸಬೇಕಾಗಿ ವಿನಂತಿ.
