ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ನೆನಪು ಮಾಸುವುದಕ್ಕೆ ಮುನ್ನವೇ ನಗರದ ಮತ್ತೊಂದು ಖಾಸಗಿ ಹೋಟೆಲ್ ಗೆ ಬಾಂಬ್ ಬೆದರಿಕೆ ಪತ್ರ ರವಾನೆ ಮಾಡಲಾಗಿದೆ. ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ ನಲ್ಲಿದ್ದ ಗ್ರಾಹಕರನ್ನು ಹೊರಕಳುಹಿಸಿ ಜಾಲಹಳ್ಳಿ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಎಚ್ ಎಂಟಿ ಮೈದಾನ ಬಳಿಯ ಕದಂಬ ಸುತ್ತಮುತ್ತ ಬಾಂಬ್ ಇರಿಸಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿದೆ. ಕಳೆದ ಮಾರ್ಚ್ 1ರಂದು ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಕ್ಯಾಂಟೀನ್ ಗೆ ಗ್ರಾಹಕನಂತೆ ಬಂದಿದ್ದ ಬಾಂಬರ್ ತಿಂಡಿ ತಿಂದು ಅಲ್ಲೇ ಬಾಂಬ್ ಇಟ್ಟು ಹೋಗಿದ್ದ. ಆತ ಹೋದ ಕೆಲವು ಹೊತ್ತಿನ ಬಳಿಕ ಬಾಂಬ್ ಸ್ಫೋಟಗೊಂಡಿತ್ತು.