ಕಾಸರಗೋಡು: ಸಾಹಿತಿ, ದ್ರಾವಿಡ ಭಾಷಾ ಸಂಶೋಧಕಿ, ಅನುವಾದ ಸಾಹಿತಿ, ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್, ಬೆಂಗಳೂರು ಇವರಿಗೆ ಕಾಸರಗೋಡು ಕನ್ನಡ ಭವನದ “ಕನ್ನಡ ಪಯಸ್ವಿನಿ ಪ್ರಶಸ್ತಿ ೨೦೨೪” ನೀಡಿ ಗೌರವಿಸಲಾಗುತ್ತಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು, ಭಾಷೆಗಳಲ್ಲಿ ಸುಮಾರು ೨೦ರಷ್ಟು ಕೃತಿಗಳನ್ನು ಹೊರ ತಂದ ಡಾ. ಸುಷ್ಮಾ ಶಂಕರ್, ಕನ್ನಡದಲ್ಲಿ ಭೂಮಿಗೊಂದು ಚರಮ ಗೀತೆ, ಮೊದಮೊದಲ ಗೆರೆಗಳು, ಅನ್ನ ಕೊಟ್ಟ ಕನ್ನಡ ಮಣ್ಣು, ಅಕ್ಷರ, ಕುಸಿದು ಬಿದ್ದ ಲೋಕ, ಭೂತದ ಹಾಡು, ಮುಂತಾದ ಕೃತಿಗಳನ್ನು ಸಮರ್ಪಸಿದ್ದಾರೆ. ಮಕ್ಕಳಿಗಾಗಿಯೇ “ತೊದಲ್ನುಡಿ” ಎಂಬ ಚಿಣ್ಣರ ಮಾಸಪತ್ರಿಕೆಯನ್ನು ಪ್ರಕಟಿಸುತ್ತಾ ಶಾಲಾ ಮಕ್ಕಳಲ್ಲಿ ಭಾಷಾಭಿಮಾನ, ಸಾಹಿತ್ಯಾಭಿಮಾನ ಮೂಡಿಸುವ ಸಲುವಾಗಿ ೧೦೦೦ಕ್ಕೂ ಮಿಕ್ಕಿ ಶಾಲೆಗಳಲ್ಲಿ ವಿಚಾರ ಸಂಕಿರಣ, ಪ್ರಭೋದನೆ ನಡೆಸಿದ್ದಾರೆ. ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ, ಕೋಲಾರದ ಪತ್ರಕರ್ತರ ಭವನದಲ್ಲಿ, ಕನ್ನಡ ಭವನ ಗ್ರಂಥಾಲಯ, ಕಾಸರಗೋಡು, ಸ್ವರ್ಣಭೂಮಿ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಕೋಲಾರ ಸಂಯುಕ್ತ ಆಶ್ರಯದಲ್ಲಿ ನಡೆಯುವ “ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆ” ಅಂಗವಾಗಿ ಹಮ್ಮಿಕೊಂಡ “ಕಾಸರಗೋಡು – ಕೋಲಾರ ಕನ್ನಡ ಉತ್ಸವ”, ವೇದಿಕೆಯಲ್ಲಿ ಡಾ. ಸುಷ್ಮಾ ಶಂಕರ್ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ರಾಜ್ಯ ಅಂತರ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2024”, ನೀಡಿ ಗೌರವಿಸಲಾಗುತ್ತಿದೆ ಎಂದು ಕನ್ನಡ ಭವನ ಸಂಸ್ಥೆಯ ರೂವಾರಿಗಳಾದ ಡಾ. ಕೆ. ವಾಮನ್ ರಾವ್ ಬೇಕಲ್ ಮತ್ತು ಸಂದ್ಯಾ ರಾಣಿ ಟೀಚರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಡಾ. ಸುಷ್ಮಾ ಶಂಕರ್ ಅವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಪ್ರಶಸ್ತಿ 2024″
RELATED ARTICLES