Saturday, December 14, 2024
Homeಮಂಗಳೂರುಬೆಂಗಳೂರು ಕಂಬಳ ಈ ಬಾರಿ ಡೌಟ್‌ | ಕಾರಣ ಏನು?

ಬೆಂಗಳೂರು ಕಂಬಳ ಈ ಬಾರಿ ಡೌಟ್‌ | ಕಾರಣ ಏನು?

ಮಂಗಳೂರು: ಬೆಂಗಳೂರಿನಲ್ಲಿ ಕಳೆದ ವರ್ಷ ಅದ್ದೂರಿಯಾಗಿ ನಡೆದಿದ್ದ ಕಂಬಳ ಈ ಬಾರಿ ನಡೆಯುವ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಅ.26ಕ್ಕೆ ಇಲ್ಲಿ ಬೆಂಗಳೂರು ಕಂಬಳ ನಿಗದಿಯಾಗಿತ್ತು. ಆದರೆ ಈ ದಿನ ಕಂಬಳ ನಡೆಯುವುದಿಲ್ಲ, ಅಲ್ಲದೆ ಈ ವರ್ಷ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಕಂಬಳ ನಡೆಸುವುದು ಬಹಳ ಕಷ್ಟದ ಕೆಲಸ. ಪ್ಯಾಲೇಸ್‌ ಗ್ರೌಂಡ್‌ ಅನುಮತಿ ದೊರೆಯಬೇಕಾದರೆ 3 ತಿಂಗಳ ಮುನ್ನ ಪ್ರಕ್ರಿಯೆ ಆರಂಭಿಸಬೇಕು. ಮೈಸೂರು ಅರಮನೆ ಮತ್ತು ಸರ್ಕಾರದಿಂದ ಅನುಮತಿ ಪಡೆಯಬೇಕು. ಕರೆ ನಿರ್ಮಾಣ ಸಹಿತ ಮೂಲ ವ್ಯವಸ್ಥೆ ಕಲ್ಪಿಡಬೇಕು ಹಾಗೂ ಕೋಣಗಳನ್ನು ತುಳುನಾಡಿನಿಂದ ಬೆಂಗಳೂರಿಗೆ ಕೊಂಡೊಯ್ಯಬೇಕು. ಇಂತಹ ಹತ್ತು ಹಲವು ಸವಾಲು ಎದುರಿಸುವ ಜೊತೆಗೆ ಕೋಟ್ಯಂತರ ರೂ. ಖರ್ಚು ಮಾಡಬೇಕು. ಕಳೆದ ವರ್ಷ ಮೊದಲ ವರ್ಷದ ಕಂಬಳವೆಂಬ ನೆಲೆಗಟ್ಟಿನಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಕಳೆದ ಬಾರಿಯ ಉತ್ಸಾಹ ಕುಸಿದಿದೆ ಎನ್ನಲಾಗುತ್ತಿದೆ.
ಒಂದು ಮಾಹಿತಿ ಪ್ರಕಾರ, ಕಂಬಳ ಋತುವಿನ ಆರಂಭದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಯುವುದಿಲ್ಲ. ಆದರೆ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರುಗಳು ಒಪ್ಪಿಗೆ ಸೂಚಿಸಿದರೆ ಮಾರ್ಚ್‌ನಲ್ಲಿ ಕಂಬಳ ನಡೆಸಬಹುದೇ ಎಂಬ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ. ಬೆಂಗಳೂರು ಸಮಿತಿ ಅರಮನೆ ಮೈದಾನಕ್ಕೆ ಅನುಮತಿಗೆ ಅರ್ಜಿ ಹಾಕಿದೆ ಎನ್ನಲಾಗಿದೆ.
ಬೆಂಗಳೂರು ಕಂಬಳಕ್ಕೆ ಸಮಿತಿ ದಿನಾಂಕ ನೀಡಿತ್ತು. ಆದರೆ ಕಂಬಳ ಆಯೋಜನೆಯ ಸಿದ್ಧತೆ ನಡೆದಿಲ್ಲ. ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ಕಂಬಳ ನಡೆಯುವ ಸಾಧ್ಯತೆ ಕಡಿಮೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.

RELATED ARTICLES
- Advertisment -
Google search engine

Most Popular