ಬೆಂಗಳೂರು: ದೇಶದಲ್ಲೇ ಅತ್ಯಧಿಕ ವಾಹನಗಳನ್ನು ಹೊಂದಿದ್ದ ನಗರಗಳ ಪೈಕಿ ಬೆಂಗಳೂರು ನಂ.1 ಸ್ಥಾನದಲ್ಲಿ ನಿಂತಿದೆ. ಅಂಕಿ ಅಂಶದ ಪ್ರಕಾರ ಬೆಂಗಳೂರಿನಲ್ಲಿ 1.16 ಕೋಟಿ ವಾಹನಗಳು ನೋಂದಣಿಯಾಗಿವೆ.
ಪೀಕ್ ಅವರ್ ಗಳಲ್ಲಿ ನಗರದಲ್ಲಿ ಸುಮಾರು ಅರುವತ್ತು ಲಕ್ಷ ವಾಹನಗಳು ರಸ್ತೆಗಿಳಿಯುತ್ತವೆ. ಇಡೀ ದೇಶದಲ್ಲಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳು ಅತ್ಯಧಿಕವಿದೆ. ವಾಹನಗಳ ಸಂಖ್ಯೆಯಲ್ಲಿ ರಾಜ್ಯ ರಾಜಧಾನಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ಹಿಂದಿಕ್ಕಿದೆ.
ಇಷ್ಟು ವಾಹನಗಳಿದ್ದೂ ನಗರದಲ್ಲಿ ಎಲ್ಲಾ ಸಿಗ್ನಲ್ ಗಳಲ್ಲಿ ಪೊಲೀಸರು ಸಂಚಾರ ಸುಗಮಗೊಳಿಸುತ್ತಿದ್ದಾರೆ. ಜೈಕಾದಿಂದ ಈಗಾಗಲೇ 28 ಸಿಗ್ನಲ್ ಅಳವಡಿಸಲಾಗಿದೆ. ಸಂಚಾರ ಪೊಲೀಸ್ ವಿಭಾಗದಿಂದ 163 ಸಿ ಡಾಕ್ ಅಭಿವೃದ್ಧಿಪಡಿಸಿರುವ ಕಾಸಿಕಾಸ್ಟ್ ಸಿಗ್ನಲ್ ಅಳವಡಿಸಲಾಗುತ್ತಿದೆ. ಮುಂದಿನ ಆರೆಂಟು ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಇದು ಸಂಚಾರ ವ್ಯವಸ್ಥೆ ಸುಧಾರಣೆಗೆ ಅನುಕೂಲವಾಗಲಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.