Saturday, July 20, 2024
Homeಕ್ರೀಡೆಬೆಂಗಳೂರು: ತುಳುನಾಡ ಜವನೆರ್ (ರಿ.) ವತಿಯಿಂದ ತುಳುನಾಡ್ ಟ್ರೋಫಿ

ಬೆಂಗಳೂರು: ತುಳುನಾಡ ಜವನೆರ್ (ರಿ.) ವತಿಯಿಂದ ತುಳುನಾಡ್ ಟ್ರೋಫಿ

ಬೆಂಗಳೂರು ತುಳುನಾಡ ಜವನೆರ್ (ರಿ.) ವತಿಯಿಂದ ಭಾಷೆ-ಕ್ರೀಡೆ-ಸೇವೆ ಎನ್ನುವ ಧ್ಯೇಯವಾಕ್ಯದೊಂದಿಗೆ ತುಳುನಾಡ್ ಟ್ರೋಫಿ ಸಂಭ್ರಮದಿಂದ ನಡೆಯಿತು.

ತಾವರೆಕೆರೆ ಆರ್ ಎನ್ ಎಸ್ ವಿದ್ಯಾನಿಕೇತನ ಆಯೋಜನೆ ಮಾಡಿದ 2ನೇ ವರ್ಷದ TJB ಪ್ರೀಮಿಯರ್ ಲೀಗ್ ನಲ್ಲಿ ಒಟ್ಟು 12 ಸಂಘಗಳು ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಇರುವ ತುಳುನಾಡಿನ ಜವನೆರ್ ಮ್ಯಾಚ್ ನೋಡಿ ಸಂಭ್ರಮಿಸಿದರು.

ಮೊದಲ ಬಹುಮಾನವನ್ನು ತುಳುನಾಡ ರಂಗ್ ರಾಜಾಜಿನಗರ ಪಡೆದರು, ತುಳುನಾಡ ತುಡರ್ ಯಶವಂತಪುರ 2ನೇ ಬಹುಮಾನ ಪಡೆದರು. ತುಳುನಾಡ ಬಿರ್ಸೆರ್ ವೈಟ್ ಫೀಲ್ಡ್ ಮತ್ತು ತುಳುನಾಡ ಬೊಲ್ಪು ಬನ್ನೇರುಘಟ್ಟ 3ನೇ ಮತ್ತು 4ನೇ ಬಹುಮಾನ ಪಡೆದರು.

ಇದರೊಂದಿಗೆ ತುಳುನಾಡ ಕೇಸರಿ ಯಲಹಂಕ, ತುಳುನಾಡ ಕುರಲ್ ಕೆಂಗೇರಿ, ತುಳುನಾಡ ಸೂರ್ಯಚಂದ್ರೆರ್ ವಿಜಯನಗರ, ತುಳುನಾಡ ಬೊಳ್ಳಿ ಅತ್ತಿಗುಪ್ಪೆ, ತುಳುನಾಡ ಪುರ್ಪ ಎಲೆಕ್ಟ್ರಾನಿಕ್ ಸಿಟಿ, ತುಳುನಾಡ ಸಿರಿ ಜೆಪಿನಗರ, ತುಳುನಾಡ ದಂಡ್ ಪೀಣ್ಯ ಸಂಘಗಳು ರಾಜಬಿಡಿನ ಬೇರೆ ಬೇರೆ ಭಾಗದಲ್ಲಿ ಇರುವ ತುಳುವರನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಸೇವಾ ಚಟುವಟಿಕೆಯಾಗಿ ಬೆಂಗಳೂರಿನ 2 ಆಶ್ರಮಗಳಿಗೆ ವಸ್ತ್ರದಾನ ಮತ್ತು ಅಕ್ಕಿ ನೀಡಿದರು, ಹಾಗೆಯೇ ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡಿಸುವಲ್ಲಿ ತುಳುವಿಗೆ ಪ್ರಾಧಾನ್ಯತೆ ನೀಡಬೇಕು ಎನ್ನುವ ದೃಷ್ಡಿಯಿಂದ ದೇಶದ ಮಾನ್ಯ ಪ್ರಧಾನ ಮಂತ್ರಿಯಾದ ನರೇಂದ್ರ ಮೋದೀಜಿ ಅವರಿಗೆ ಪತ್ರದ ಮೂಲಕ ತಿಳಿಸಿ 5000 ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದರು.

ತುಳುನಾಡ ಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ದೀಪ ಬೆಳಗಿಸುವ ಮೂಲಕ ಸಂಸ್ಥೆಯ ಮಾರ್ಗದರ್ಶಕ ಸಂದೀಪ್ ಹೆಗ್ಡೆ ಮತ್ತು ಸದಾನಂದ ಶೆಟ್ಟಿ ಚಾಲನೆ ನೀಡಿದರು.

ದುರ್ಗಾಪ್ರಸಾದ್ ಕಡೆಶೀವಾಲಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಚಾಲಕ ಶ್ರುತಿನ್ ಕಡೇಶಿವಾಲಯ ಪ್ರಸ್ತಾವನೆಯೊಂದಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಹೇಶ್ ಬೈಲೂರು, ಕ್ರೀಡಾ ಕಾರ್ಯದರ್ಶಿ ಅರ್ಜುನ್ ಎರ್ಮಾಳ್, ಕೋಶಾಧಿಕಾರಿ ಅಮಿತ್‌, ಸಹಸಂಚಾಲಕ ಶಶಿ ಕಾವೂರ್, ಉಪಾಧ್ಯಕ್ಷ ಹರಿಪ್ರಸಾದ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಆಟಗಾರರು ಮೈದಾನ ಮತ್ತು ಶಾಲೆಯ ಆವರಣವನ್ನು ಸ್ವಚ್ಚ ಮಾಡುವ ಮೂಲಕ ಸ್ವಚ್ಚ ಭಾರತ ಅಭಿಯಾನದಲ್ಲಿ ಭಾಗಿಯಾದರು.

RELATED ARTICLES
- Advertisment -
Google search engine

Most Popular