ಹಿಂದೆಲ್ಲಾ ಏನೂ ಮಾಡದೆ ಸುಮ್ಮನೆ ಕುಳಿತು, ಮಲಗಿ ತಿಂದುಂಡರೆ ಅವರನ್ನು ಸೋಮಾರಿಗಳೆಂದು ಜನರು ಜರೆಯುತ್ತಿದ್ದರು. ಆದರೆ ಈಗ ಸುಮ್ಮನೆ ಏನೂ ಮಾಡದೆ ಕೇವಲ ನಿದ್ದೆ ಮಾಡಿ ಹಣ ಗಳಿಸುವ ಕಾಲ ಬಂದಿದೆ. ಏನೂ ಮಾಡದೆ ಕೇವಲ ನಿದ್ದೆ ಮಾಡಿ ಬೆಂಗಳೂರಿನ ಸಾಯೀಶ್ವರಿ ಪಾಟೀಲ್ 9 ಲಕ್ಷ ರೂ. ಗೆದ್ದಿರುವುದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿಯಾಗಿದೆ. ಬರೀ ನಿದ್ದೆ ಮಾಡಿ ಲಕ್ಷ ಲಕ್ಷ ಹಣ ಹೇಗೆ ಗೆದ್ದರು ಎಂದು ನಿಮಗೆ ಸಂಶಯ ಸಂದೇಹ ಮೂಡಬಹುದು. ಆದರೆ, ಕೆಲವು ದಿನಗಳ ಹಿಂದೆ ಈ ಬಗ್ಗೆ ನಾವು ಸುದ್ದಿಯೊಂದನ್ನು ಮಾಡಿದ್ದೆವು. ಆ ಸುದ್ದಿಯಲ್ಲಿ ಸಂಸ್ಥೆಯೊಂದರ ಸ್ಲೀಪ್ ಚಾಂಪಿಯನ್ ಸ್ಪರ್ಧೆಯಲ್ಲಿ ಗೆದ್ದವರಿಗೆ ಲಕ್ಷ ಲಕ್ಷ ಹಣ ಗೆಲ್ಲುವ ಅವಕಾಶದ ಬಗ್ಗೆ ತಿಳಿಸಿದ್ದೆವು. ಆ ಸುದ್ದಿಯ ಪ್ರಯೋಜನ ಪಡೆದಿರುವ ಸಾಯೀಶ್ವರಿ ಪಾಟೀಲ್ ಈಗ ಸ್ಲೀಪ್ ಚಾಂಪಿಯನ್ ಪ್ರಶಸ್ತಿಯ ಜೊತೆಗೆ 9 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ.
ಸಾಯೀಶ್ವರಿ ಅವರು ಬೆಂಗಳೂರಿನ ಸ್ಟಾರ್ಟ್ ಅಪ್ ಹೋಮ್ ಆ್ಯಂಡ್ ಸ್ಲೀಪ್ ಸೊಲ್ಯೂಶನ್ ಬ್ರ್ಯಾಂಡ್ ವೇಕ್‌ಫಿಟ್‌ನ ಸ್ಲೀಪ್ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮೂಲಕ ಅತೀ ಹೆಚ್ಚು ನಿದ್ದೆ ಮಾಡಿ ‘ಸ್ಲೀಪ್ ಚಾಂಪಿಯನ್’ ಪ್ರಶಸ್ತಿಯ ಜೊತೆಗೆ 9 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ವೇಕ್‌ಫಿಟ್ ಕಂಪೆಯಲ್ಲಿ “ಸ್ಲೀಪ್ ಇಂಟರ್ನ್‌ಶಿಪ್” ಅನ್ನು ಆಯೋಜಿಸಲಾಗಿದ್ದು, ಈ ಸ್ಲೀಪ್ ಇಂಟರ್ನ್‌ಶಿಪ್ ದೇಶದಾದ್ಯಂತ ಗಮನ ಸೆಳೆದಿತ್ತು. ಇದು 60 ದಿನಗಳ ಸ್ಲೀಪ್ ಇಂಟರ್ನ್‌ಶಿಪ್. ಇಲ್ಲಿ ಬೇರೇನೂ ಕೆಲಸ ಇಲ್ಲ. 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ ಅಷ್ಟೇ. ಪವರ್ ನ್ಯಾಪ್‌ಗಳನ್ನು ತೆಗೆದುಕೊಳ್ಳುವ ಮೂಲಕ ಹೊಸ ವೇಕ್‌ಫಿಟ್ ಹಾಸಿಗೆಯನ್ನು ಪರೀಕ್ಷಿಸುವುದು ಅವರ ಕೆಲಸ.
ದಿನಪೂರ್ತಿ ನಿದ್ದೆ ಮಾಡಿ 9 ಲಕ್ಷ ಸಂಪಾದಿಸಿದ ಸಾಯೀಶ್ವರಿ ಪಾಟೀಲ್!
RELATED ARTICLES