ಕೆಲಸದ ಒತ್ತಡದಿಂದ ಕುರ್ಚಿ ಮೇಲೆ ಕುಳಿತೇ ಬ್ಯಾಂಕ್‌ನ ಮಹಿಳಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಲಕ್ನೊದಲ್ಲಿ ನಡೆದಿದೆ. ಕೆಲಸದ ಒತ್ತಡದಿಂದಲೇ ಆಕೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಸಹೋದ್ಯೋಗಿಯೊಬ್ಬರು ಆಪಾದಿಸಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ನದಾಫ್ ಫಾತಿಮಾ ಎಂಬ ಮಹಿಳೆ ಕುರ್ಚಿಯಲ್ಲೇ ಕುಳಿತು ಮೃತಪಟ್ಟಿದ್ದಾರೆ. ಗೋಮ್ಟಿನಗರದಲ್ಲಿರುವ ಬ್ಯಾಂಕಿನ ವಿಬೂತಿಖಂಡ್ ಶಾಖೆಯಲಿ ಸೆ. 24ರಂದು ಕರ್ತವ್ಯದಲ್ಲಿದ್ದ ವೇಳೆ ಮಹಿಳೆ ಕುರ್ಚಿಯಿಂದ ಕೆಳಗೆ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.