Wednesday, July 24, 2024
Homeಮೂಡುಬಿದಿರೆಬನ್ನಡ್ಕ: ಯಕ್ಷಸಿರಿ ಕಲಾವೇದಿಕೆಯಿಂದ ಯಕ್ಷ ಪ್ರವಾಸ

ಬನ್ನಡ್ಕ: ಯಕ್ಷಸಿರಿ ಕಲಾವೇದಿಕೆಯಿಂದ ಯಕ್ಷ ಪ್ರವಾಸ

ಮೂಡಬಿದಿರೆ: ಯಕ್ಷ ಪ್ರವಾಸ ಯಕ್ಷಸಿರಿ ಕಲಾವೇದಿಕೆ ಬನ್ನಡ್ಕ ಮೂಡಬಿದಿರೆ ಹಾಗೂ ಯಕ್ಷಸಿರಿ ಕಲಾವೇದಿಕೆ ಖಂಡಿಗಮೂಲೆ ಸುಳ್ಯದ ಯಕ್ಷಗಾನ ಕಲಾ ತಂಡಗಳ ಸಂಚಾಲಕರಾದ ಶಾಮಭಟ್ ಪಾಡ್ಯಾರು ನೇತೃತ್ವದಲ್ಲಿ ಸೌಹಾರ್ದಯುತ ಒಂದು ದಿನದ ಪ್ರವಾಸವನ್ನು 16/6/2024 ರಂದು ಆಯೋಜನೆ ಮಾಡಲಾಯಿತು.

ಯಕ್ಷಸಿರಿಯೊಂದಿಗೆ ಎಸ್ಎನ್ಎಂ ಪಾಲಿಟೆಕ್ನಿಕ್ ಮೂಡಬಿದ್ರೆಯ ಯಕ್ಷಗಾನ ತಂಡ ಯಕ್ಷವೃಂದದ ವಿದ್ಯಾರ್ಥಿಗಳು ಸೇರಿಕೊಂಡು ಈ ಪ್ರವಾಸಕ್ಕೆ ಇನ್ನಷ್ಟು ಮೆರುಗನ್ನು ನೀಡಿದರು. ಚಿಕ್ಕಮಗಳೂರು ಜಿಲ್ಲೆಯ ಪ್ರೇಕ್ಷಣೀಯ ತಾಣಗಳಾದ ದೇವರಮನೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಹಾಗೂ ಸಂಸೆ ಯನ್ನು ಈ ಪ್ರವಾಸ ಒಳಗೊಂಡಿತ್ತು. ಕೇವಲ ತರಗತಿಯ ಪಾಠಗಳು ಮಾತ್ರವಲ್ಲದೆ ಕಲಿಕಾಸಕ್ತಿಯನ್ನು ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳೆಲ್ಲರೂ ಬೆರೆತುಕೊಳ್ಳಲು ಇದು ಸಹಕಾರಿಯಾಯಿತು. ಈ ಪ್ರವಾಸದ ನಾಯಕತ್ವವನ್ನು ತಂಡದ ಹಿರಿಯ ವಿದ್ಯಾರ್ಥಿಗಳಾದ ಶ್ರವಣ್ ಹಾಗೂ ಬಾಸ್ಮಿತಾ ವಹಿಸಿದ್ದರು.

RELATED ARTICLES
- Advertisment -
Google search engine

Most Popular