ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ , ಮೂಡನಿಡಂಬೂರು ಬನ್ನಂಜೆ ಉಡುಪಿ ಇದರ ರಜತ ಮೊಹೋತ್ಸವದಲ್ಲಿ ಪೂಜಿತ ಕ್ಷಿಪ್ರ ಪ್ರಸಾದ ಗಣಪತಿ ದೇವರ ವಿಸರ್ಜನಾ ಮಹಾಪೂಜೆಯ ಬಳಿಕ ಶ್ರೀ ದೇವರ ಶೋಭಾಯಾತ್ರೆ ಮಂಗಳವಾರ ಸಂಜೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಿಂದ ಹೊರಟು ಬನ್ನಂಜೆಯ ಮುಖ್ಯರಸ್ತೆ, ಪ್ರವಾಸಿ ಮಂದಿರ, ಬ್ರಹ್ಮಗಿರಿ ಸರ್ಕಲ್, ಜಿಲ್ಲಾ ಆಸ್ಪತೆ ಅಜ್ಜರಕಾಡು, ಬಿಗ್ ಬಜಾರ್,ಕೆ ಎಮ್ ಮಾರ್ಗ, ತ್ರಿವೇಣಿ ಸರ್ಕಲ್ ,ಸರ್ವಿಸ್ ಬಸ್ ಸ್ಟ್ಯಾಂಡ , ಕಿದಿಯೂರು ಹೋಟೆಲ್, ಶಿರಬೀಡು ಮೂಲಕ ಸಾಗಿ ಬಂದು ಶ್ರೀ ದೇವಳದ ಪದ್ಮಾ ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು. ಶ್ರೀ ಗಣೇಶ ಮೂರ್ತಿಯ ಶೋಭಾಯಾತ್ರೆಯಲ್ಲಿ ವಿಶೇಷ ಹೂವಿನ ಅಲಂಕೃತ ವಾಹನದಲ್ಲಿ ಮಂಗಳ ವಾದ್ಯ,ಮುಂತಾದ ಜನಾಕರ್ಷ ಟ್ಯಾಬ್ಲೊಗಳೊಂದಿಗೆ ಚಂಡೆ ವಾದನ, ಮಂಗಳ ವಾದ್ಯ, ಮಹಿಳಾ ತಂಡ , ಹುಲಿವೇಷ, ಅರ್ಧನಾರೀಶ್ವರ, ಶ್ರೀದೇವಿ, ರಾಮಮಂದಿರ, ಭೂ ಕೈಲಾಸ, ಮಹಾಕಾಳಿ, ಈಶ್ವರ, ನವದುರ್ಗೆ , ಆನೆ , ನಾಸಿಕ್ ಬ್ಯಾಂಡ್ , ವಿಸ್ಮಯ ಬನ್ನಂಜೆ, ಅದ್ದೂರಿ ವಿದ್ಯುತ್ ದೀಪಾಂಲಂಕಾರ ಮುಂತಾದ ಜನಾಕರ್ಷ ಟ್ಯಾಬ್ಲೊಗಳೊಂದಿಗೆ ಮೆರವಣಿಗೆದೊಂದಿಗೆ ಸಂಪನ್ನಗೊಂಡಿತು ಬನ್ನಂಜೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಎಮ್. ಪ್ರಭಾಕರ್ ಶೆಟ್ಟಿ, ಸಮಿತಿಯ ಅಧ್ಯಕ್ಷರಾದ ಯೋಗೀಶ್ ಭಂಡಾರಿ ಬನ್ನಂಜೆ, ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಯೋಗೀಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮನೋಹರ್ ಶಾಸ್ತ್ರಿ ಕೋಶಾಧಿಕಾರಿ ಯು. ಸುಬ್ರಹ್ಮಣ್ಯ ರಾವ್, ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ ಹಾಗೂ ಸಂಘದ ಪದಿಕಾರಿಗಳು ಸಾವಿರಾರು ಭಕ್ತರೂ ಉಪಸ್ಥರಿದ್ದರು.
ಬನ್ನಂಜೆ: ರಜತ ಮೊಹೋತ್ಸವ, ಶ್ರೀ ಗಣೇಶ ಮೂರ್ತಿಯ ಶೋಭಾಯಾತ್ರೆ ಸಂಪನ್ನ
RELATED ARTICLES