ಬಂಟ್ವಾಳ ತಾಲ್ಲೂಕಿನ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಗುರುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಯಮಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ, ಮುಖ್ಯಶಿಕ್ಷಕ ಜೇಸನ್ ಮೋನಿಸ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸಿಪ್ರಿಯಾನ್ ಡಿಸೋಜಾ, ಶೈಲಾ ಬಬರ್ೊಜಾ, ಪ್ರಕಾಶ್ ವಾಸ್, ಭಗಿನಿ ಇಡೊಲಿನ್ ರೊಡ್ರಿಗಸ್, ಕೆಥೊಲಿಕ್ ಸಭಾ ಅಧ್ಯಕ್ಷ ರಾಯನ್ ರೊಡ್ರಿಗಸ್, ಸುನಿತಾ ಕ್ರಾಸ್ತಾ, ನತಾಲಿಯಾ ಡಿಸಿಲ್ವ, ಮಲರೈನ್ ಮಾರ್ಟಿಸ್ ಮತ್ತಿತರರು ಇದ್ದರು.