ಬಂಟ್ವಾಳ: ಮಾ.21ರಿಂದ ಏ.4ರತನಕ ಇಲ್ಲಿನ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಒಟ್ಟು 6008 ಮಂದಿ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 3159 ಮಂದಿ ಬಾಲಕರು ಮತ್ತು 2849 ಮಂದಿ ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಈ ಪೈಕಿ 3076 ಮಂದಿ ಬಾಲಕರು ಹೊಸ ವಿದ್ಯಾರ್ಥಿಗಳಾಗಿದ್ದಾರೆ. 83 ಮಂದಿ ಬಾಲಕರು ಪುನರಾವರ್ತಿತ ಬಾಲಕರು. 2836 ಮಂದಿ ಹೊಸ ಬಾಲಕಿಯರು ಮತ್ತು 13 ಮಂದಿ ಬಾಲಕಿಯರು ಪುನರಾವರ್ತಿತ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.