Wednesday, January 15, 2025
Homeಬಂಟ್ವಾಳಬಂಟ್ವಾಳ: ಮಡಿವಾಳ ಸಮಾಜ ಸೇವಾ ಸಂಘದ 33ನೇ ವಾರ್ಷಿಕೋತ್ಸವ ಸಂಘಟನೆಯಿಂದ ಸುಶಿಕ್ಷಿತ ಸಮಾಜ: ಕರಿಂಜೆ ಶ್ರೀ

ಬಂಟ್ವಾಳ: ಮಡಿವಾಳ ಸಮಾಜ ಸೇವಾ ಸಂಘದ 33ನೇ ವಾರ್ಷಿಕೋತ್ಸವ ಸಂಘಟನೆಯಿಂದ ಸುಶಿಕ್ಷಿತ ಸಮಾಜ: ಕರಿಂಜೆ ಶ್ರೀ


ಬಂಟ್ವಾಳ: ಸಮಾಜದಲ್ಲಿ ಎಲ್ಲರೂ ಸಂಘಟಿತರಾಗುವ ಮೂಲಕ ಶಿಕ್ಷಣ ಮತ್ತು ಹೊಸ ಪ್ರತಿಭೆಗಳ ಅನ್ವೇಷಣೆ ಮೂಲಕ ಸುಶಿಕ್ಷಕಿತ ಸಮಾಜ ನಿಮರ್ಿಸಲು ಸಾಧ್ಯವಿದೆ ಎಂದು ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಮಡಿವಾಳ ಸಮಾಜ ಸೇವಾ ಸಂಘದ ವತಿಯಿಂದ ಕಂದೂರು ಮಾಚಿದೇವ ಸಭಾಂಗಣದಲ್ಲಿ ಭಾನುವಾರ ನಡೆದ 33ನೇವಾರ್ಷಿಕೋತ್ಸವ ಕಾರ‍್ಯಕ್ರಮದಲ್ಲಿ
ಅವರು ಆಶರ‍್ವಚನ ನೀಡಿದರು.
ತಾಲ್ಲೂಕು ಸಂಘದ ಅಧ್ಯಕ್ಷ ಹರೀಶ್ ಮಂಕುಡೆ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್, ಪುತ್ತೂರಿನ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ., ಮಂಗಳೂರು ಆಕೃತಿ ಆಶಯ ಪಬ್ಲಿಕೇಷನ್ ಪ್ರಕಾಶಕ ಕಲ್ಲೂರು ನಾಗೇಶ್ ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ಎನ್. ಕೆ. ಶಿವ, ಮಡಿವಾಳ ಯುವ ಬಳಗ ಅಧ್ಯಕ್ಷ ಸಂದೇಶ್ ಕೊಯಿಲ, ಮಹಿಳಾ ಬಳಗ ಅಧ್ಯಕ್ಷೆ ಶೋಭಾ ಪಂಜಿಕಲ್ಲು ಇದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಯೋಗೀಶ್ ಕಳಸಡ್ಕ, ವಿಶ್ವನಾಥ ಮಡಿವಾಳ ಅನಂತಾಡಿ, ಭಾಗೀರಥಿ ಕೆದಿಲ, ಪದ್ಮನಾಭ ಗುಜರನ್ ಸಿದ್ಧಕಟ್ಟೆ, ವಸಂತಿ ಪ್ರಕಾಶ್ ಕಿದೆಬೆಟ್ಟು, ಲಕ್ಷ್ಮಣ ಬಂಗೇರ ಶರವು, ಪದ್ಮನಾಭ ಕಿದೆಬೆಟ್ಟು ಇವರನ್ನು ಸನ್ಮಾನಿಸಲಾಯಿತು.
ಸ್ಪಶರ್ಾ ಕೆಳಗಿನ ಪಂಜಿಕಲ್ಲು ಮತ್ತು ರಕ್ಷಾ ವಕ್ಷಿತ್ ಪ್ರಾಥರ್ಿಸಿದರು. ಪುಷ್ಪರಾಜ್ ಕುಕ್ಕಾಜೆ ಸ್ವಾಗತಿಸಿ, ಮಹಿಳಾ ಬಳಗದ ಅಧ್ಯಕ್ಷೆ ಶೋಭಾ ಪಂಜಿಕಲ್ಲು ವಂದಿಸಿದರು. ವೆಂಕಟೇಶ ಮಾಸ್ತರ್ ಅನಂತಾಡಿ ಕಾರ‍್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular