Tuesday, January 14, 2025
Homeಬಂಟ್ವಾಳಬಂಟ್ವಾಳ : ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ

ಬಂಟ್ವಾಳ : ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಭೂರು ಎಂಬಲ್ಲಿ ರೂ 1.95 ಕೋಟಿ ವೆಚ್ಚದಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಗೊಂಡಿದೆ. ಶಂಭೂರು: ರೂ 1.95 ಕೋಟಿ ವೆಚ್ಚದಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ ನಿಮರ್ಾಣ ಬಂಟ್ವಾಳ ಮತ್ತು ಉಳ್ಳಾಲ ತಾಲ್ಲೂಕಿನ 57 ಗ್ರಾಮ ಪಂಚಾಯಿತಿಗಳಿಗೆ ವರದಾನ ಬಂಟ್ವಾಳ: ಇಲ್ಲಿನ ಬಂಟ್ವಾಳ ಮತ್ತು ಉಳ್ಳಾಲ ತಾಲ್ಲೂಕಿನ ಒಟ್ಟು 57 ಗ್ರಾಮ ಪಂಚಾಯಿತಿ ಸಂಗ್ರಹಿಸಿ ನಿರ್ವಹಣೆ ಹೊಣೆ ಹಿನ್ನೆಲೆಯಲ್ಲಿ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಭೂರಿನಲ್ಲಿ ಸುಮಾರು ರೂ 1.95 ಕೋಟಿ ವೆಚ್ಚದಲ್ಲಿ ‘ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ (ಎಂ ಆರ್ ಎಫ್) ನಿಮರ್ಾಣಗೊಂಡಿದೆ. ಮಂಗಳೂರಿನ ತೆಂಕಎಡಪದವು ಗ್ರಾಮದಲ್ಲಿ ಜಿಲ್ಲೆಯ ಪ್ರಥಮ ಎಂ ಆರ್ ಎಫ್ ಘಟಕ ಅನುಷ್ಠಾನಗೊಂಡಿದ್ದು, 2ನೇ ಹಂತದಲ್ಲಿ ಬೆಳ್ತಂಗಡಿಯ ಉಜಿರೆ, ಪುತ್ತೂರಿನ ಕೆದಂಬಾಡಿ ಮತ್ತು ಬಂಟ್ವಾಳದ ಶಂಭೂರಿಗೆ ಘಟಕ ಮಂಜೂರಾಗಿತ್ತು. ಇಲ್ಲಿನ ಎಂ ಆರ್ ಎಫ್ ಘಟಕದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಯಂತ್ರೋಪಕರಣ ಜೋಡಣೆಯೂ ಮುಗಿದು ಪ್ರಾಯೋಗಿಕವಾಗಿ ಬಳಕೆ ಆರಂಬಗೊಂಡಿದೆ. ಈ ಘಟಕದಿಂದ ಬಂಟ್ವಾಳದ 40 ಮತ್ತು ಉಳ್ಳಾಲದ 17 ಗ್ರಾಮ ಪಂಚಾಯಿತಿಗಳಿಗೆ ಘನ ತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗಲಿದೆ. ಶಂಭೂರಿನಲ್ಲಿ ಸ.ನಂ. 24/1ಜಿರ 1 ಎಕ್ರೆ ಜಮೀನಿನಲ್ಲಿ ಸುಮಾರು 7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಘಟಕ ಅನುಷ್ಠಾನಗೊಂಡಿದೆ. ಪ್ರತಿದಿನ 7 ಟನ್ ಒಣ ತ್ಯಾಜ್ಯ ವಿಂಗಡಿಸಿ ನಿರ್ವಹಣೆಗೊಳಿಸುವ ಸಾಮರ್ಥ್ಯ ಹೊಂದಿದ್ದು, ಒಟ್ಟು 99,520 ಮನೆಗಳು ಮತ್ತು ವಾಣಿಜ್ಯ ಮಳಿಗೆಗಳ ಒಣ ತ್ಯಾಜ್ಯ ನಿರ್ವಹಣೆಯಾಗಲಿದೆ. ಇಂತಹ ತ್ಯಾಜ್ಯ ನಿರ್ವಹಣಾ ಘಟಕದಿಂದ ಸಾವಯವ ಗೊಬ್ಬರ ಉತ್ಪಾದನೆ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ ಎಂದು ಇಲ್ಲಿನ ಕೃಷಿಕರು ಸಲಹೆ ನೀಡುತ್ತಿದ್ದಾರೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಶುಲ್ಕ ರಹಿತ ಮಾದರಿ ಅನುಸರಿಸಲಾಗಿದ್ದು, ಇಲ್ಲಿ ಯಾವುದೇ ಗ್ರಾಮ ಪಂಚಾಯಿತಿ ಹಣ ಪಾವತಿಸುವ ಅಗತ್ಯವಿಲ್ಲ. ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿ ಸಂಗ್ರಹಿಸುವ ತ್ಯಾಜ್ಯಗಳನ್ನು ಅಲ್ಲಿನ ಸ್ವಚ್ಛ ಸಂಕೀರ್ಣ ತ್ಯಾಜ್ಯ ಘಟಕದಲ್ಲಿ ವಿಂಗಡನೆ ಮಾಡಿ ಚೀಲದಲ್ಲಿ ಶೇಖರಿಸಿಡಲಾಗುತ್ತಿದೆ. ಇವೆಲ್ಲವನ್ನೂ ಎಂ ಆರ್ ಎಫ್ ಘಟಕಕ್ಕೆ ತರಲು ಪ್ರತ್ಯೇಕ ರೂಟ್ ಮ್ಯಾಪ್ ಸಿದ್ಧಪಡಿಸಲಾಗುತ್ತಿದೆ. ಈ ತ್ಯಾಜ್ಯಗಳನ್ನು ಯಂತ್ರಗಳ ಮೂಲಕ ಕಣವಾಗಿ ಪರಿವತರ್ಿಸಿ ಬಳಿಕ ವಿವಿಧ ವಿಭಾಗಗಳಲ್ಲಿ ಪ್ರತ್ಯೇಕಿಸಿ ಮರು ಉತ್ಪಾದನೆ ಮತ್ತು ಸಿಮೆಂಟ್ ಉತ್ಪಾದನಾ ಘಟಕಗಳಿಗೆ ಇಂಧನವಾಗಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ ತಾಂತ್ರಿಕ ಮತ್ತು ಆಡಳಿತ ಸಮಿತಿ ರಚನೆಗೊಂಡಿದೆ. ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ಘಟಕದ ನಿರ್ವಹಣೆ ಹೊಣೆ ಹೊತ್ತಿದೆ. ಪ್ರತೀ ಗ್ರಾಮ ಪಂಚಾಯಿತಿನಲ್ಲಿ ತ್ಯಾಜ್ಯ ಸಂಗ್ರಹಿಸುವ ವಾಹನ ಖರೀದಿಗೆ ಜಿಲ್ಲೆಯ ವಿವಿಧ ಕಂಪೆನಿಗಳ ಸಿ ಎಸ್ ಆರ್ ಅನುದಾನ ಬಳಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular